July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

71ನೇ ಅಖಿಲ ಭಾರತ ಸಹಕಾರ ಸಪ್ತಾಹ-2024: ಬೆಳ್ತಂಗಡಿ ತಾಲೂಕು ಮಟ್ಟದ ಸಹಕಾರ ಸಪ್ತಾಹ ಉದ್ಘಾಟನೆ

ಬಾರ್ಯ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮಂಗಳೂರು, ಬೆಳ್ತಂಗಡಿ ತಾಲೂಕು ಸಹಕಾರಿ ಯೂನಿಯನ್, ಬೆಳ್ತಂಗಡಿ ಬೆಳ್ತಂಗಡಿ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳು ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘಗಳು, ತಾಲೂಕಿನ ಇತರ ಎಲ್ಲಾ ಸಹಕಾರಿ ಸಂಘಗಳ ಸಹಕಾರ-ಸಹಭಾಗಿ ತ್ವದಲ್ಲಿ ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘ ಇವರ ನೇತೃತ್ವದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ-2024, ತಾಲೂಕು ಮಟ್ಟದ ಸಹಕಾರ ಸಪ್ತಾಹ ಸಮಾರಂಭ ಮತ್ತು ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು ಇದರ ಬಗ್ಗೆ ವಿಚಾರಗೋಷ್ಠಿ ನ.18ರಂದು ಸಹಕಾರ ರತ್ನ ದಿ|ನಿರಂಜನ್ ಭಾವಂತಬೆಟ್ಟು ವೇದಿಕೆ, ಬಾರ್ಯದಲ್ಲಿ ಅದ್ದೂರಿಯಾಗಿ ಆರಂಭಗೊಂಡಿತು.

ಬೆಳಿಗ್ಗೆ ಧ್ವಜಾರೋಹಣವನ್ನು ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ನೆರವೇರಿಸಿದರು.
ನಂತರ ಹಾಲು ಉತ್ಪಾದಕರ ಸಹಕಾರಿ ಸಂಘ ಕಲ್ಲೇರಿ ತಣ್ಣೀರುಪಂತದಿಂದ ಆರಂಭಗೊಂಡ ಸಹಕಾರಿ ಮೆರವಣಿಗೆಗೆ, ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಗೊಟ್ಟು ಚಾಲನೆ ನೀಡಿದರು.

ಬಾಯ೯ದ ಸಹಕಾರ ರತ್ನ ದಿ| ನಿರಂಜನ್ ಬಾವಂತಬೆಟ್ಟು ವೇದಿಕೆಯಲ್ಲಿ ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ್ ರೈ ಪಿ. ಇವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಸಹಕಾರ ಸಪ್ತಾಹವನ್ನು ಶಾಸಕ ಹರೀಶ್ ಪೂಂಜ ಅವರು
ದೀಪ ಬೆಳಗಿಸಿ ಉದ್ಘಾಟಿಸಿದರು.


ಮುಖ್ಯ ಅತಿಥಿಗಳಾಗಿ ಸುಚರಿತ ಶೆಟ್ಟಿ ಅಧ್ಯಕ್ಷರು, ದ.ಕ. ಹಾಲು ಉತ್ಪಾದಕರ ಒಕ್ಕೂಟ, ಕುಶಾಲಪ್ಪ ಗೌಡ ಪೂವಾಜೆ ನಿರ್ದೇಶಕರು, ದ.ಕ.ಜಿ. ಕೇಂದ್ರ ಸಹಕಾರಿ ಬ್ಯಾಂಕ್, ಪದ್ಮನಾಭ ಅರ್ಕಜೆ ನಿರ್ದೇಶಕರು, ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ, ಶ್ರೀಮತಿ ಸಾವಿತ್ರಿ ರೈ ನಿರ್ದೇಶಕರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ರಮೇಶ್ ಹೆಚ್. ಎನ್. ಸಹಕಾರ ಸಂಘಗಳ ಉಪನಿಬಂಧಕರು, ಎಸ್.ಎಂ. ರಘು, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಪುತ್ತೂರು, ಸತೀಶ್ ಕೆ., ಅಧ್ಯಕ್ಷರು, ತಾಲೂಕು ಸಹಕಾರಿ ಯೂನಿಯನ್ ಬೆಳ್ತಂಗಡಿ, ಜಯರಾಜ ಹೆಗ್ಡೆ ಪಿ., ಅಧ್ಯಕ್ಷರು, ಹಾಲು ಉತ್ಪಾದಕರ ಸಹಕಾರಿ ಸಂಘ, ತಣ್ಣೀರುಪಂತ, ಉಸ್ಮಾನ್ ಪಿ.ಕೆ., ಅಧ್ಯಕ್ಷರು, ಗ್ರಾ.ಪಂ. ಬಾರ್ಯ ಭಾಗವಹಿಸಿದ್ದರು.


ಸಂಪನ್ಮೂಲ ವ್ಯಕ್ತಿ ಶ್ರೀ ಧವಳ ಕಾಲೇಜು, ಮೂಡಬಿದ್ರೆಯ ಅಸಿಸ್ಟೆಂಟ್ ಪ್ರೋಫೆಸರ್ ಸಂತೋಷ್ ಶೆಟ್ಟಿ ಅವರು ‘ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು ವಿಷಯದಲ್ಲಿ ಮಾಹಿತಿ ನೀಡಿದರು.
ಬಾಯ೯ ಸಹಕಾರಿ ಸಂಘದ ಉಪಾಧ್ಯಕ್ಷ ಶಿವರಾಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಗೌಡ, ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಯರಾಜ್ ಹೆಗ್ಡೆ, ಕಾಯ೯ದಶಿ೯ ಜಯರಾಜ್ ಹಾಗೂ ಎರಡು ಸಂಘಗಳ ನಿದೇ೯ಶಕರು, ಸದಸ್ಯರು ಉಪಸ್ಥಿತರಿದ್ದರು.


ಪುಷ್ಯ ಪ್ರಸನ್ನ ಬೊಳ್ತಡ್ಕ ಇವರ ಪ್ರಾಥ೯ನೆ ಬಳಿಕ ಬಾಯ೯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರಾಜೇಶ್ ರೈ ಸ್ವಾಗತಿಸಿದರು. ಗಣೇಶ್ ಪಿಲಿಕಲ್ಲು ಕಾಯ೯ಕ್ರಮ ನಿರೂಪಿಸಿದರು.

Related posts

ನೆರಿಯ ಗ್ರಾ.ಪಂ. ಅಧ್ಯಕ್ಷರಾಗಿ ವಸಂತಿ ಹಾಗೂ ಉಪಾಧ್ಯಕ್ಷರಾಗಿ ಸಜಿತಾ ಆಯ್ಕೆ

Suddi Udaya

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ ವಿತರಣೆ

Suddi Udaya

ನೆರಿಯ : ತೋಟತ್ತಾಡಿ, ದಡ್ಡುವಿನಲ್ಲಿ ನೀರಲ್ಲಿ ಸಿಲಿಕಿಕೊಂಡ ಕಾರು

Suddi Udaya

ಬಿಜೆಪಿ ತಣ್ಣೀರುಪoತ ಶಕ್ತಿಕೇಂದ್ರ ಪ್ರಮುಖ್ ಆಗಿ ಚೇತನ್ ಸುವರ್ಣ ಅಳಕ್ಕೆ ಆಯ್ಕೆ

Suddi Udaya

ಪುತ್ತಿಲ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಪ್ರವೀಣ್ ಬೇಂಗಿಲ ನಿಧನ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಉಚಿತ ದಂತ ಚಿಕಿತ್ಸಾ ಹಾಗೂ ಆರೋಗ್ಯ ತಪಾಸಣಾ ಶಿಬಿರ

Suddi Udaya
error: Content is protected !!