ಬೆಳ್ತಂಗಡಿ: ಭಾರತೀಯ ಅರಸೇನಾಪಡೆಗಳ ಮಾಜಿ ಯೋಧರ ಸಂಘ ಉಡುಪಿ ಹಾಗೂ ದ.ಕ. ಜಿಲ್ಲೆ 2024ನೇ ವರ್ಷದ ವಾರ್ಷಿಕ ಸಭೆ, ಪ್ರತಿಭಾ ಪುರಸ್ಕಾರ ಮತ್ತು ಮಾಜಿ ಯೋಧರ ಕುಟುಂಬ ಸಮ್ಮಿಲನ ಹಾಗೂ ಮನೋರಂಜನಾ ಕಾರ್ಯಕ್ರಮವು ನ.18ರಂದು ರಂದು ಗುರುವಾಯನಕೆರೆ ನವಶಕ್ತಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಿ.ಎ.ಪಿ.ಎಫ್. ರಾಜ್ಯ ಸಂಘದ ಮಾಜಿ ಗೌರವಾಧ್ಯಕ್ಷ ಶಿವರಾಮ ಉದ್ಘಾಟಿಸಿದರು.
ಉಡುಪಿ ಹಾಗೂ ದ.ಕ. ಜಿಲ್ಲಾ ಅಧ್ಯಕ್ಷ ತಿರುಮೂರ್ತಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಸಿ.ಎ.ಪಿ.ಎಫ್. ರಾಜ್ಯ ಸಂಘದ ಮಾಜಿ ಅಧ್ಯಕ್ಷ ನರಸಿಂಹ ರೆಡ್ಡಿ, ಉಪಾಧ್ಯಕ್ಷ ಕೃಷ್ಣಪ್ಪ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಸಿ.ಎ.ಪಿ. ಎಫ್ ಮಾಜಿ ನಿರ್ದೇಶಕರಾದ ಎಸ್. ಮಾದಯ್ಯ, ಆರ್.ಕೆ. ನಲುವಾಡಿ, ನರಸಿಂಹ ಜೋಗಿ, ಬೆಂಗಳೂರು ಜಿಲ್ಲಾ ಅಧ್ಯಕ್ಷ ಡಾ| ಶಿವಣ್ಣ, ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಗೌಡ, ಬೆಂಗಳೂರು ಜಿಲ್ಲಾ ಕೋಶಾಧಿಕಾರಿ ರವಿ ಶಂಕರ್, ಬೆಂಗಳೂರು ಜಿಲ್ಲಾ ನಿರ್ದೇಶಕ ಲಕ್ಷ್ಮಿ ನಾರಾಯಣ, ವಲಯ ಸಮಿತಿ ಗೌರವಾಧ್ಯಕ್ಷ ರಾಜೇಶ್ ಮೆಂಡನ್, ಉಪಾಧ್ಯಕ್ಷ ಸುಧಾಕರ್ ಸಾಲಿಯಾನ್, ಪ್ರ. ಕಾರ್ಯದರ್ಶಿ ಜಯರಾಮ ಶೆಟ್ಟಿ, ಕಾರ್ಯದರ್ಶಿ ಪದ್ಮನಾಭ ರಾವ್, ಕೋಶಾಧಿಕಾರಿ ಮಂಜಪ್ಪ ಎಲ್, ಜೊತೆ ಕಾರ್ಯದರ್ಶಿ ಆನಂದ ಬಿ.ಎಂ., ನಿರ್ದೇಶಕರಾದ ಕೆ.ಪಿ. ಗೌಡ, ರಘುನಾಥ್ ಶೆಟ್ಟಿ, ದಾಮೋದರ್, ವಿಜಯ್ ಕುಮಾರ್, ರಾಜೇಶ್ ಶೆಟ್ಟಿಗಾರ್, ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷ ಸೂರಪ್ಪ ಗೌಡ, ಕಾರ್ಯದರ್ಶಿ ಜೇಮ್ಸ್ ಕೆ.ವಿ, ಕೋಶಾಧಿಕಾರಿ ಮಂಜಪ್ಪ ಎಲ್ ಉಪಸ್ಥಿತರಿದ್ದರು.
ಈ ವೇಳೆ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.
ತಾಲೂಕು ವಲಯ ಸಮಿತಿ ಲಕ್ಷ್ಮಣ್ ಜಿ.ಡಿ. ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಯರಾಮ ಶೆಟ್ಟಿ ಸ್ವಾಗತಿಸಿ, ಉಡುಪಿ ತಾಲೂಕು ವಲಯ ಸಮಿತಿ ಸಂಘಟನಾ ಕಾರ್ಯದರ್ಶಿ ಕೇಶವ ಆಚಾರ್ಯ ಧನ್ಯವಾದವಿತ್ತರು.