23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ನಾರಾವಿ ವಲಯ ಬಂಟರ ಸಂಘದ ಕುತ್ಲೂರು ಗ್ರಾಮ ಸಮಿತಿ ಸಭೆ

ನಾರಾವಿ : ನಾರಾವಿ ವಲಯ ಬಂಟರ ಸಂಘದ ಕುತ್ಲೂರು ಹಾಗೂ ನಾರಾವಿ ಗ್ರಾಮ ಸಮಿತಿಯ ಸಭೆಯು ಶಿವಣ್ಣ ಶೆಟ್ಟಿಯವರ ಮನೆಯಲ್ಲಿ ನಡೆಯಿತು.

ಸಭೆಯಲ್ಲಿ ನಾರಾವಿ ಕುತ್ಲೂರು ಗ್ರಾಮ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಡಾ| ಪ್ರಸಾದ್ ಶೆಟ್ಟಿ ನಾರಾವಿ, ಅಧ್ಯಕ್ಷರಾಗಿ ಪವನ್ ಶೆಟ್ಟಿ , ಕುತ್ಲೂರು ಕಾರ್ಯದರ್ಶಿಯಾಗಿ ಹರಿಪ್ರಸಾದ್ ರೈ ನಾರಾವಿ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಮಮತಾ ಶೆಟ್ಟಿ ಪಾಣಾಲು, ಕೋಶಾಧಿಕಾರಿಯಾಗಿ ಶ್ರೀಮತಿ ಮಮತಾ ಶೆಟ್ಟಿ ಕುತ್ಲೂರು ಹಾಗೂ ಉಪಾಧ್ಯಕ್ಷರಾಗಿ ಶಿವಣ್ಣ ಶೆಟ್ಟಿ ಕುತ್ಲೂರು, ಬೋಜ ಶೆಟ್ಟಿ, ಕೂತ್ಲೂರು ಕೃಷ್ಣ ಶೆಟ್ಟಿ ನಾರಾವಿ ಆಯ್ಕೆಯಾಗಿರುತ್ತಾರೆ.

ಸಭೆಯಲ್ಲಿ ನಾರಾವಿ ವಲಯದ ಸಂಚಾಲಕ ರವಿ ಶೆಟ್ಟಿ, ವಿಶ್ವನಾಥ ಶೆಟ್ಟಿ, ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ಕಾರ್ಯದರ್ಶಿ ಶಿವಣ್ಣ ಶೆಟ್ಟಿ , ಜೊತೆ ಕಾರ್ಯದರ್ಶಿ ಶ್ರೀಮತಿ ಸ್ವಾತಿ ಶೆಟ್ಟಿ, ಕೊಕ್ರಾಡಿ ಗ್ರಾಮ ಸಮಿತಿಯ ಗೌರವಾಧ್ಯಕ್ಷರಾದ ರಾಜುಶೆಟ್ಟಿ, ಸುಲ್ಕೇರಿ ಗ್ರಾಮ ಸಮಿತಿಯ ಅಧ್ಯಕ್ಷ ಮಹಾಬಲ ಶೆಟ್ಟಿ, ಕುತ್ಲೂರು ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಶೆಟ್ಟಿ ಹಾಗೂ ಇನ್ನಿತರ ಬಂಟ ಬಂಧುಗಳು ಉಪಸ್ಥಿತರಿದ್ದರು.

Related posts

ಮಡಂತ್ಯಾರು ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಾಘಾತದಿಂದ ನಿಧನ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಹಲವು ಪ್ರಶಸ್ತಿಗಳು

Suddi Udaya

ಮಾ.9: ಲಾಯಿಲ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಅಷ್ಠಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

Suddi Udaya

ಕುಕ್ಕೇಡಿ: ಸುಡುಮದ್ದು ತಯಾರಿಕ ಘಟಕದಲ್ಲಿ ಸ್ಪೋಟ ಪ್ರಕರಣ: ಕೇಂದ್ರ ತನಿಖಾ ಸಂಸ್ಥೆಯ ಮುಖಾಂತರ ಹೆಚ್ಚಿನ ತನಿಖೆಯನ್ನು ನಡೆಸುವಂತೆ ವೇಣೂರು ಹಿಂದೂ ಜಾಗರಣ ವೇದಿಕೆಯ ವತಿಯಿಂದ ವೇಣೂರು ಪೊಲೀಸರಿಗೆ ಮನವಿ

Suddi Udaya

ಗೇರುಕಟ್ಟೆ : ಕೊರಂಜ ಭಾರಿ ಮಳೆಗೆ ಚರಂಡಿ ನೀರು ಮನೆಯೊಳಗೆ

Suddi Udaya

ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಎಲ್ಲರಿಗೂ ಅಭಿನಂದನೆಗಳು – ಹರೀಶ್ ಪೂಂಜ

Suddi Udaya
error: Content is protected !!