ಪುಂಜಾಲಕಟ್ಟೆ: ಕೆ ಪಿ ಎಸ್ ಪುಂಜಾಲಕಟ್ಟೆಯ ಪದವಿ ಪೂರ್ವ ವಿಭಾಗದ ಕಂಪ್ಯೂಟರ್ ವಿಭಾಗದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪದವಿಪೂರ್ವ ಉಪನಿರ್ದೇಶಕ ಜಯಣ್ಣ ಸಿ ಡಿ ಉದ್ಘಾಟಿಸಿದರು ಮತ್ತು ಪ್ರಸ್ತುತ ಕಾಲಘಟ್ಟದಲ್ಲಿ ಕಂಪ್ಯೂಟರ್ ಶಿಕ್ಷಣದ ಅಗತ್ಯತೆ ಬಗ್ಗೆ ಉದ್ಘಾಟನಾ ನುಡಿಗಳಲ್ಲಿ ಪ್ರಸ್ತಾವಿಸಿದರು. ಅದೇ ದಿನ ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿತು.
ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೂಪನವೀನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪುಂಜಾಲಕಟ್ಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಪ್ರೊ ಮಾಧವ್ ವಿದ್ಯಾರ್ಥಿ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕರೆಯಿತ್ತರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ದಿವಾಕರ್ ಮತ್ತು ಮಡಂತ್ಯಾರು ಪಂಚಾಯತ್ ಸದಸ್ಯ ಹನೀಫ್ ಉಪಸ್ಥಿತರಿದ್ದರು.
ಪ್ರಾಂಶುಪಾಲರು ಡಾ. ಸರೋಜಿನಿ ಆಚಾರ್ ವರದಿ ವಾಚಿಸಿದರು. ಉಪನ್ಯಾಸಕಿ ಜಯಶ್ರೀ ಕೆ ಎನ್ ಸ್ವಾಗತಿಸಿದರು. ಕೀರ್ತಿ ವಂದಿಸಿದರು. ತಹೀರಾ ಬಾನು ಮತ್ತು ಡಾ. ವಸಂತಿ ಕಾರ್ಯಕ್ರಮ ನಿರ್ವಹಿಸಿದರು. ವಿನುತಾ ಶ್ವೇತಾ ಮತ್ತು ಸುಪ್ರೀತ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕರು ಸಹಕರಿಸಿದರು. ಉಪಪ್ರಾಂಶುಪಾಲರಾದ ಉದಯಕುಮಾರ್ ಮತ್ತು ಪ್ರಾಥಮಿಕ ವಿಭಾಗದ ಪ್ರಭಾರ ಮುಖ್ಯ ಉಪಾಧ್ಯಯರು ಕರುಣಾಕರ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.