ನ.22: ಗೆಜ್ಜೆಗಿರಿಯಲ್ಲಿ ಮೂರನೇ ವರ್ಷದ ಗೆಜ್ಜೆನಾದದ ವೈಭವ

Suddi Udaya

ಪುತ್ತೂರು: ನ. 22 ರಂದು ಎರಡು ವರ್ಷದ ತಿರುಗಾಟದಲ್ಲಿ ಪ್ರಚಂಡ ಪ್ರದರ್ಶನವನ್ನು ನೀಡಿ ಮನೆಮಾತಾದ ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಗೆಜ್ಜೆಗಿರಿ ಮೇಳದ ಮೂರನೇ ವರ್ಷದ ಪ್ರಥಮ ದೇವರ ಸೇವೆ ಆಟವು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಸಂಜೆ 5:40ಕ್ಕೆ ಗೆಜ್ಜೆ ಮುಹೂರ್ತದ ಬಳಿಕ ಚೌಕಿ ಪೂಜೆಯೊಂದಿಗೆ, ಅಶ್ವಮೇಧ ಯಕ್ಷಗಾನ ಬಳಿಕ ಪ್ರಾಯೋಗಿಕವಾಗಿ ಕಾಲ ಕಲ್ಜಿಗ ಎಂಬ ಯಕ್ಷಗಾನ ನಡೆಯಲಿದೆ.

ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಮತ್ತು ಕಲಾವಿದರುಗಳಿಗೆ, ಅಭಿನಂದನಾ ಕಾರ್ಯಕ್ರಮ ಜರುಗಲಿದೆ ಎಂದು ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷ ಪೀತಾಂಬರ ಹೇರಾಜೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

error: Content is protected !!