April 7, 2025
ಗ್ರಾಮಾಂತರ ಸುದ್ದಿ

ಮಿತ್ತಬಾಗಿಲು:ಹರ್ಝತ್ ಸೈದಾನಿ ಬೀಬಿ ದರ್ಗಾದಲ್ಲಿ ಮಾಸಿಕ 9 ನೇ ಸ್ವಲಾತ್ ಕಾರ್ಯಕ್ರಮ

  • ವಿಕಾಲಾಂಗರಿಗೆ ನೆರವು-ವಿದ್ಯಾ ಪ್ರೋತ್ಸಾಹ ಧನ ಹಸ್ತಾಂತರ

ಮಿತ್ತಬಾಗಿಲು: ಹರ್ಝತ್ ಸೈದಾನಿ ಬೀಬಿ ದರ್ಗಾ ವಠಾರದಲ್ಲಿ ನ 25 ರಂದು ಗುರುವಾರ ಮಾಸಿಕ 9 ನೇ ಸ್ವಲಾತ್ ಕಾರ್ಯಕ್ರಮ ಜರಗಿದ್ದು ನೂರಾರು ಭಕ್ತರು ಸಾಕ್ಷಿಗಳಾಗಿದ್ದರು.

ಸಂಸ್ಥೆಯು ಅಂಗವಿಕಲರಿಗೆ, ಅಸಹಾಯಕ ನಿರ್ಗತಿಕರಿಗೆ, ವಿಧವೆಯರಿಗೆ, ವಿಧ್ಯಾಭ್ಯಾಸಕ್ಕೆ ಮತ್ತು ಬಡ ಮಕ್ಕಳ ಮದುವೆಗಾಗಿ ಪ್ರತಿ ತಿಂಗಳು ಸಹಾಯಮಾಡುತ್ತಿದ್ದು ಸ್ವಲಾತ್ ಸಂದರ್ಭದಲ್ಲಿ ಸಂಪೂರ್ಣ ಅಂಗವಿಕಲರಾದ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ನಿವಾಸಿಯವರಾದ ನಾರಾಯಣ ಗೌಡ ಎಂಬವರ ಪರವಾಗಿ ಅವರ ಪತ್ನಿ ಶ್ರೀಮತಿ ಕುಸುಮಾವತಿಯವರಿಗೆ 2024ನೇ ಇಸವಿಯ ಜೂನ್ ತಿಂಗಳಿನಿಂದ ಮಾಸಿಕ ರೂ.2000/- ಯಂತೆ ಅಂಗವಿಕಲರಿಗಾಗುವ ಸಹಾಯದನದ ಪ್ರಥಮ ಕಂತನ್ನು ವಿತರಿಸಲಾಯಿತು.

ಅದೇ ರೀತಿ 2024ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ. ಪಿ.ಕವನ ಶ್ರೀ ಎಂಬವಳಿಗೆ ವಿದ್ಯಾಭ್ಯಾಸಕ್ಕಾಗಿ ರೂ.5000/- ಸಹಾಯದವನ್ನು ಅವಳ ಪರವಾಗಿ ಪಾವತಿಸಲಾಯಿತು. ಬೆಳ್ತಂಗಡಿ ವಾಣಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಮುಷ್ಕನ್ ಕೌಸರ್ ರಾಜ್ಯದಲ್ಲಿ 7 ನೇ Rank ಪಡೆದಿದ್ದು ಅವಳಿಗೆ ರೂ.25000/- ಚೆಕ್ ಮುಖಾಂತರ ವಿತರಿಸಲಾಯಿತು.

Related posts

ಕುಂಟಿನಿ ಅಲ್ ಬುಖಾರಿ ಹಾಗೂ ಮುಹಿಯುದ್ದೀನ್ ಅರಬಿಕ್ ಸೆಕೆಂಡರಿ ಮದ್ರಸ ಆಡಳಿತ ಸಮಿತಿಯ ಮಹಾಸಭೆ: ಸಮಿತಿ ರಚನೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಎಕ್ಸೆಲ್ ಕಾಲೇಜಿನಲ್ಲಿ ತರಬೇತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ : ಎ.3 ರಂದು ಬಿ.ಎಸ್.ಪಿ ಯ ಅಭ್ಯರ್ಥಿ ಕಾಂತಪ್ಪ ಅಲಂಗಾರ್ ನಾಮಪತ್ರ ಸಲ್ಲಿಕೆ

Suddi Udaya

ಗುರುವಾಯನಕೆರೆ ಶ್ರೀ ಕ್ಷೇತ್ರ ಮಂಚಕಲ್ ದೈವ ಸನ್ನಿಧಿಯ 3ನೇ ವರುಷದ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಪರ್ವ ಸೇವೆ

Suddi Udaya

ಕಲ್ಮಂಜ: ಮಾಣಿಂಜೆ ಅಣೆಕಟ್ಟುವಿನಲ್ಲಿ ಸಿಕ್ಕಿಹಾಕಿಕೊಂಡ ಮರದ ದಿಮ್ಮಿಗಳು : ತೆರವುಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ಲಾಯಿಲ: 35ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!