27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಕೂಡಬೆಟ್ಟು ಸದಾಶಿವ ದೇವಸ್ಥಾನದಲ್ಲಿ ಶತರುದ್ರಾಭಿಷೇಕ

ಮಿತ್ತಬಾಗಿಲು : ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನದಲ್ಲಿ ಸ್ಥಾನಿಕ ಬ್ರಾಹ್ಮಣ ಪುರೋಹಿತ ಅರ್ಚಕ ಪರಿಪಾಲನಾ ಸಭಾ ಹಾಗೂ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಬಂಗಾಡಿ ವಲಯಗಳ ವತಿಯಿಂದ ಬ್ರಹ್ಮಶ್ರೀ ವೇದಮೂರ್ತಿ ಪಾವಂಜೆ ವಾಗೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ಶತರುದ್ರಾಭಿಷೇಕ ಕಾರ್ಯಕ್ರಮವು ಜರಗಿತು.

ಬಳಿಕ ಭರತನಾಟ್ಯ, ಯಕ್ಷಗಾನ ಹಾಡು,ಭಜನೆ, ಚೆಂಡೆ ವಾದನ ಶಂಖವಾದನ, ವೇದಮಂತ್ರ ಘೋಷಗಳೊಂದಿಗೆ ಅಪರೂಪದ ಅಷ್ಟಾವಧಾನ ಕಾರ್ಯಕ್ರಮವು ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಹೆಚ್. ವಾಸುದೇವ ರಾವ್, ಶಿವಾನಂದ ರಾವ್ ಕಕ್ಕೆನೇಜಿ, ಶ್ರೀಮತಿ ನಾಗರತ್ನ ಕೊಲ್ಲಿಪಾಲು, ಪುರೋಹಿತ ವರ್ಗದವರು ಉಪಸ್ಥಿತರಿದ್ದರು. ಶ್ರೀ ವಾಗೀಶ ಶಾಸ್ತ್ರಿಗಳು ಧಾರ್ಮಿಕ ಪ್ರವಚನ ಮಾಡುತ್ತಾ ರುದ್ರಾಭಿಷೇಕ, ರುದ್ರನ ಮಹಿಮೆಯನ್ನು ವರ್ಣಿಸಿದರು, ಮನುಷ್ಯನಿಗೆ ಎಲ್ಲಾ ಭಾಗ್ಯಗಳಿಗಿಂತಲೂ ಆರೋಗ್ಯ ಭಾಗ್ಯವೇ ಮಿಗಿಲಾದುದು, ಬದುಕಿನಲ್ಲಿ , ಬದುಕು ಮುಗಿದ ಬಳಿಕವೂ ನಮ್ಮೊಂದಿಗೆ ಸದಾ ಬರುವುದು ನಾವು ಮಾಡಿದ ಧರ್ಮ ಕಾರ್ಯಗಳು ಮಾತ್ರವೆಂದು ನುಡಿದರು.

ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಕೆ. ಧನಂಜಯ ರಾವ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಸುತ್ತಮುತ್ತಲಿನ ಪ್ರದೇಶಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆಯೊಂದಿಗೆ ಈ ಅಪರೂಪದ ಕಾರ್ಯಕ್ರಮವು ಸಮಾಪನಗೊಂಡಿತು.

Related posts

ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್‍ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

Suddi Udaya

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಆಶಾಕೇಂದ್ರವಾಗಲಿದೆ ಬೈಂದೂರಿನ ಹೇನಬೇರು ಶಾಲೆ

Suddi Udaya

ಉಜಿರೆ  ಅತ್ತಾಜೆ ಕೇಶವ ಭಟ್ ಅವಿಭಕ್ತ ಕುಟುಂಬಕ್ಕೆ ಉಂಡೆಮನೆ ಪ್ರಶಸ್ತಿ   

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಭಾರಿಯಾಗಿ ಯತೀಶ್ ಆರ್‍ವಾರ ನೇಮಕ

Suddi Udaya

ಬೆಳ್ತಂಗಡಿ ಶ್ರೀ ಧ. ಮಂ.ಆಂ.ಮಾ. ಶಾಲೆಯಲ್ಲಿ ಆಟಿದ ಕೂಟ

Suddi Udaya

ಕಡಿರುದ್ಯಾವರ: ಪಣಿಕಲ್ಲು ಎಂಬಲ್ಲಿ ತೋಟಕ್ಕೆ ಕಾಡಾನೆ ದಾಳಿ: ಅಪಾರ ಕೃಷಿ ಹಾನಿ

Suddi Udaya
error: Content is protected !!