April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳು

ಉಜಿರೆ ಸಂತ ಅಂತೋನಿ ಚರ್ಚ್ ಇದರ ಮುಂದಾಳತ್ವದಲ್ಲಿ ದಾನಿಗಳ ನೆರವಿನಿಂದ ನಿರ್ಮಾಣಗೊಂಡ ಹೊಸಮನೆ ಹಸ್ತಾಂತರ ಕಾರ್ಯಕ್ರಮ

ಉಜಿರೆ: ಸಂತ ಅಂತೋನಿ ಚರ್ಚ್ಇದರ ಮುಂದಾಳತ್ವದಲ್ಲಿ ದಾನಿಗಳ ನೆರವಿನಿಂದ ನಿರ್ಮಾಣಗೊಂಡ 5ನೇ ಯೋಜನೆ, ಅಶಕ್ತ ಕುಟುಂಬಕ್ಕೆ ಹೊಸಮನೆ “ಅನುಗ್ರಹ” ಇದರ ಆಶೀರ್ವಚನ ಮತ್ತು ಹಸ್ತಾಂತರ ಕಾರ್ಯಕ್ರಮವು ನ.24 ರಂದು ಉಜಿರೆ ನೆಲ್ಲಿಪದವು ನಲ್ಲಿ ನಡೆಯಿತು.

ಉಜಿರೆ ಸಂತ ಅಂತೋನಿ ಚರ್ಚ್ ಇದರ ಧರ್ಮ ಗುರುಗಳಾದ ವಂದನೀಯ ಅಬೆಲ್ ಲೋಬೋ ರವರು ಹೊಸ ಮನೆಯ ಆಶೀರ್ವಚನ ಕಾರ್ಯಕ್ರಮ ನೆರವೇರಿಸಿದರು.

ಅತಿಥಿಗಳಾಗಿ ಹ್ಯುಮ್ಯಾನಿಟಿ ಟ್ರಸ್ಟ್ ಬೆಲ್ಮಣ್ ಇದರ ಸ್ಥಾಪಕರಾದ ರೋಶನ್ ಡಿ’ಸೋಜ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಷಾ ಕಿರಣ್ ಕಾರಂತ್ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ವಂದನೀಯ ಧರ್ಮಗುರು ವಿಜಯ್ ಲೋಬೋ, ಉಜಿರೆ ಸಂತ ಲಾರೆನ್ಸ್ ವಾಳೆ ಗುರಿಕಾರರು ಶ್ರೀಮತಿ ಮರ್ಲಿನ್ ಡಿ’ಸೋಜ, ಫಲಾನುಭವಿ ರೋಜಿ ಪಾಯ್ಸ್ ರವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಜಿರೆ ದಯಾಳ್‌ಭಾಗ್ ಆಶ್ರಮದ ಸುಪೀರಿಯ‌ರ್ ವಂದನೀಯ ಧರ್ಮಗುರು ಫೆಡ್ರಿಕ್ ಬ್ರಾಗ್ಸ್, ಲಾಯಿಲ ದಯಾ ಸ್ಪೆಷಲ್ ಸ್ಕೂಲ್ ಇದರ ವಂದನೀಯ ಧರ್ಮಗುರು ವಿನೋದ್ ಮಸ್ಕರೇನಸ್, ಉಜಿರೆ ಎಸ್.ಎಂ. ಐ. ಕಾನ್ವೆಂಟ್ ಇದರ ಸುಪೀರಿಯರ್ ಸಿಸ್ಟರ್ ನ್ಯಾನ್ಸಿ ಡಾಯಸ್, ಎಸ್.ವಿ.ಪಿ. ಉಜಿರೆ ಘಟಕದ ಅಧ್ಯಕ್ಷ ಸೆಬಾಸ್ಟಿಯನ್ ಡಿ’ಸೋಜ, ಉಜಿರೆ ಎಸ್.ಸಿ.ಸಿ ಸಂಚಾಲಕ ರೋಶನ್ ಡಿ’ಸೋಜಾ, ಪಂಚಾಯತ್ ಸದಸ್ಯರು ಹಾಗೂ ಕಟ್ಟಡ ನಿರ್ಮಾಣ ಗುತ್ತಿಗೆದಾರಅನಿಲ್ ಡಿ’ಸೋಜಾ, ಫಲಾನುಭವಿಗಳಾದ ರೋಜಿ ಪಾಯ್ಸ್ ರವರ ಕುಟುಂಬಸ್ಥರು, ದಾನಿಗಳು, ಸ್ಥಳೀಯರು ಉಪಸ್ಥಿತರಿದ್ದರು.

ಉಜಿರೆ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಅಂತೋನಿ ಫೆರ್ನಾಂಡಿಸ್ ಪ್ರಸ್ತಾವಿಕವಾಗಿ ಮಾತನಾಡಿದರು. ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಅಗೋರಿ ವಾಸ್, ಪಾಲನಾ ಆಯೋಗ ಸಂಚಾಲಕಿ ಶ್ರೀಮತಿ ಲವೀನಾ ಫೆರ್ನಾಂಡಿಸ್ ನಿರೂಪಿಸಿ ಧನ್ಯವಾದವಿತ್ತರು.

Related posts

ಉಜಿರೆ: ಎಸ್.ಡಿ.ಎಂ.(ಸಿದ್ದವನ ಗುರುಕುಲ) ಡೈರಿಂಗ್ ಡಿಪ್ಲೋಮಾ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ

Suddi Udaya

ಅರಸಿನಮಕ್ಕಿ ಗ್ರಾ.ಪಂ. ನಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆ

Suddi Udaya

ಉಜಿರೆ ಶ್ರೀ ಧ.ಮಂ.ಪ.ಪೂ. ಕಾಲೇಜಿನ ಎನ್.ಎಸ್.ಎಸ್ ವತಿಯಿಂದ ‘ ನಮ್ಮ ನಡಿಗೆ ಡಿಜಿಟಲ್ ಕಡೆಗೆ ‘ ಡಿಜಿಟಲ್ ಸಾಕ್ಷರತಾ ಜಾಗೃತಿ ಕಾರ್ಯಕ್ರಮ

Suddi Udaya

ಪೆರಾಡಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Suddi Udaya

ಸುಲ್ಕೇರಿಮೊಗ್ರು: ಕೇದುಕುಲೆಂಜಿ ನಿವಾಸಿ ಅಪ್ಪಿ ನಿಧನ

Suddi Udaya

ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ಎಲ್ಇಡಿ ಮೂಲಕ ಅಯೋಧ್ಯೆ ಶ್ರೀರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ಲೋಕಾರ್ಪಣಾ ಕಾರ್ಯಕ್ರಮ ವೀಕ್ಷಣೆ

Suddi Udaya
error: Content is protected !!