April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ: ಹೆಗ್ಗಡೆಯವರ ಜೀವನ, ಸಾಧನೆ ಯುವಜನತೆಗೆ ಮಾದರಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಉಜಿರೆ: ಎಸ್.ಡಿ.ಎಂ. ಕಾಲೇಜಿನ ಸಹಯೋಗದೊಂದಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 76ನೇ ಜನ್ಮ ದಿನದ ಶುಭಾವಸರದಲ್ಲಿ ಹೆಗ್ಗಡೆಯವರ ಜೀವನ, ಸಾಧನೆ ಯುವಜನತೆಗೆ ಮಾದರಿ ವಿಶೇಷ ಉಪನ್ಯಾಸ ಕಾರ್ಯಕ್ರಮವು ನ.25 ರಂದು ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಿತು.

ಆಳ್ವಾಸ್ ಎಜ್ಯುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್‌ ಟ್ರಸ್ಟಿ ವಿವೇಕ್ ಆಳ್ವ ರವರು ದಿಕ್ಸೂಚಿ ಭಾಷಣವನ್ನು ನೆರವೇರಿಸಿ, ಹೆಗ್ಗಡೆಯವರ 76ನೇ ಜನ್ಮ ದಿನದ ಸಂಭ್ರಮದ ನಿಮಿತ್ತ 76 ಸಸಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.

ಕಾಲೇಜು ಪ್ರಾಂಶುಪಾಲರಾದ ಡಾ. ಬಿ. ಎ. ಕುಮಾರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಕು. ರಚನಾ ಗುಡಿಗಾರ್ ರವರ ಆರೋಹಣ ಪೊಡ್ ಕಾಸ್ಟ್ ನ ಪೋಸ್ಟರ್ ನ್ನು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು.

ಅತಿಥಿಗಳಾಗಿ ಎಸ್.ಡಿ.ಎಂ.ಇ. ಸೊಸೈಟಿ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್‌., ಉಜಿರೆ ಎಸ್.ಡಿ.ಎಂ.ಇ. ಸೊಸೈಟಿ ಐಟಿ ಮತ್ತು ಹಾಸ್ಟೆಲ್ ಮ್ಯಾನೇಜೈಂಟ್ ನ ಸಿಇಒ ಪೂರನ್ ವರ್ಮ, ಇಂಜಿನಿಯರ್ ಕಾಲೇಜು ಪ್ರಾಂಶುಪಾಲ ಅಶೋಕ್ ರವರು ಉಪಸ್ಥಿತರಿದ್ದರು.

ಉಪ ಪ್ರಾಂಶುಪಾಲ ಎಸ್.ಎನ್. ಕಾಕತ್ಕರ್ ಸ್ವಾಗತಿಸಿದರು. ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎನ್.ಎಸ್.ಎಸ್ ವಿಭಾಗದ ಮಹೇಶ್ ಕುಮಾರ್ ಶೆಟ್ಟಿ ನಿರೂಪಿಸಿ, ಪಿಜಿ ವಿಭಾಗದ ಡೀನ್ ವಿಶ್ವನಾಥ್ ಪಿ. ಧನ್ಯವಾದವಿತ್ತರು.

Related posts

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರವರಿಗೆ ಸ್ವಾಗತ ಕೋರಿ ಬ್ಯಾನರ್ ಅಳವಡಿಕೆ : ಬ್ಯಾನರ್ ತೆರವು ಗೊಳಿಸಿದ ಪಟ್ಟಣ ಪಂಚಾಯತ್ ಸಿಬ್ಬಂದಿಗಳು

Suddi Udaya

ಮಡಂತ್ಯಾರು ಸುವೇಗ ಮೋಟಾರ್ಸ್ ನಲ್ಲಿ ಹೀರೊ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಬಿಡುಗಡೆ

Suddi Udaya

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ; ಸತತ ಮೂರನೇ ಅವಧಿಗೆ ಅಧ್ಯಕ್ಷರಾಗಿ ಉದ್ಯಮಿ, ಸಂಘಟಕ ಸುಂದರ ಹೆಗ್ಡೆ ಹಾಗೂ ಉಪಾಧ್ಯಕ್ಷರಾಗಿ ರತ್ನಾಕರ ಪೂಜಾರಿ ಅವಿರೋಧ ಆಯ್ಕೆ

Suddi Udaya

ನಿವೃತ್ತ ಯೋಧ ಫ್ರಾನ್ಸಿಸ್ ರವರಿಗೆ ಉಜಿರೆ ಕೆಎಸ್ಎಂಸಿಎ ಸಂಘಟನೆ ಮತ್ತು ಊರ ಗಣ್ಯರಿಂದ ಭವ್ಯ ಸ್ವಾಗತ

Suddi Udaya

ಮೈಪಾಲದಲ್ಲಿ ಭರದಿಂದ ಸಾಗುತ್ತಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿ, ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ – ಕಾಮಗಾರಿ ವೀಕ್ಷಣೆ

Suddi Udaya

ಬೆಳ್ತಂಗಡಿ : ಇನ್ಸ್ಪೆಕ್ಟರ್ ಗಂಗ್ಗಿರೆಡ್ಡಿಯನ್ನು ಸುಳ್ಳು ಪ್ರಕರಣದಲ್ಲಿ ಟ್ರ್ಯಾಪ್ ಮಾಡಿಸಿದ್ದ ದೂರುದಾರ ಹಾಗೂ ಚೆಕ್ ಬೌನ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya
error: Content is protected !!