29.5 C
ಪುತ್ತೂರು, ಬೆಳ್ತಂಗಡಿ
April 4, 2025
ತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಬೆಳಾಲು: ಅನoತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳಾಲು : ಬೆಳಾಲು ಅನoತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.

ಸಭಾಧ್ಯಕ್ಷತೆಯನ್ನು ಶ್ರೀ ಅನಂತಪದ್ಮನಾಭ ದೇವಸ್ಥಾನ ಆನಂತೋಡಿ ಬೆಳಾಲು ಇದರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ ವಹಿಸಿದ್ದರು. ವೇದಿಕೆಯಲ್ಲಿ ಜಾತ್ರೋತ್ಸವ ಸಮಿತಿ ಪ್ರಧಾನ ಸಂಚಾಲಕರಾದ ಉದಿತ್ ಕುಮಾರ್ ಜೈನ್, ದೇವಸ್ಥಾನದ ಅಸ್ರಣ್ಣರಾದ ಗಿರೀಶ್ ಬಾರಿತ್ತಾಯ ಪಾರಳ, ವ್ಯವಸ್ಥಾಪನ ಸಮಿತಿಯ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆರ್ಮುಣ್ಣಾಯ, ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ, ಮಹಿಳಾ ಸಮಿತಿಯ ಅಧ್ಯಕ್ಷೆ ಹೇಮಲತಾ ಶ್ರೀನಿವಾಸ್ ಗೌಡ, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ,ಭಜನಾ ಮಂಡಳಿಯ ಕಾರ್ಯದರ್ಶಿ ವಿಘ್ನೇಶ್ ಅನಂತೋಡಿ ಉಪಸ್ಥಿತರಿದ್ದರು.

ವ್ಯವಸ್ಥಾಪನ ಸಮಿತಿಯ ಸದಸ್ಯರು,ಬೈಲುವಾರು ಸಮಿತಿಯ ಸದಸ್ಯರು, ಭಜನಾ ಮಂಡಳಿಯ ಸದಸ್ಯರು, ಮಹಿಳಾ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಕೆ ಶಿವಪ್ರಸಾದ್ ಗೊಲ್ಲ ಸ್ವಾಗತಿಸಿ, ಎಳ್ಳುಗದ್ದೆ ಸತೀಶ್ ಗೌಡ ಧನ್ಯವಾದವಿತ್ತರು.

Related posts

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ಪ್ರತಿಭಾ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ

Suddi Udaya

ಮಿತ್ತಬಾಗಿಲು: ಎರ್ಮಾಳ್ ಪಲ್ಕೆಯಲ್ಲಿ ಮಗುಚಿಬಿದ್ದ ಹಾಲಿನ ಟ್ಯಾಂಕರ್

Suddi Udaya

ಲಾಯಿಲ : ಚಂದ್ಕೂರು ರಸ್ತೆಯಲ್ಲಿ ಚಿರತೆ ಓಡಾಟ: ಅರಣ್ಯ ಇಲಾಖೆಯಿಂದ ಪರಿಶೀಲನೆ

Suddi Udaya

ರಕ್ಷಿತ್ ಶಿವರಾಂ ಅವರ ಮನವಿಗೆ ಅಧಿಕಾರಿಗಳ ಸ್ಪಂದನೆ: ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗೆ ಗೈರು ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ

Suddi Udaya

ಮೇಲಂತಬೆಟ್ಟು: ಮನೆಯ ಮೇಲೆ ಕುಸಿದು ಬಿದ್ದ ಧರೆ: ಮನೆ ಸಂಪೂರ್ಣ ಹಾನಿ

Suddi Udaya

ಅ.11: ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ , ಶ್ರೀ ಕ್ಷೇ.ಧ. ಗ್ರಾ.ಯೋ. ಹೆಚ್.ಡಿ ಕೋಟೆ ಇದರ ಆಶ್ರಯದಲ್ಲಿ ಪಂಚಮುಖಿ ವ್ಯಕ್ತಿತ್ವ ವಿಕಸನ ಯೋಗ ಶಿಬಿರದ ಉದ್ಘಾಟನೆ

Suddi Udaya
error: Content is protected !!