24.4 C
ಪುತ್ತೂರು, ಬೆಳ್ತಂಗಡಿ
May 19, 2025
ಜಿಲ್ಲಾ ಸುದ್ದಿ

ಪೂರ್ಣಾನಂದ ಸೇವಾ ಪ್ರತಿಷ್ಠಾನ ಹಾಗೂ ದ.ಕ ಜಿಲ್ಲಾ ಕುಡಾಳ್ ದೇಶಸ್ಥ ಬ್ರಾಹ್ಮಣ ಸಂಘದ ವತಿಯಿಂದ: 27ನೇ ವಾರ್ಷಿಕ ವಿದ್ಯಾರ್ಥಿವೇತನ ವಿತರಣೆ – ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ

ಮಂಗಳೂರು: ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಹಾಗೂ ದ.ಕ ಜಿಲ್ಲಾ ಕುಡಾಳ್ ದೇಶಸ್ಥ ಬ್ರಾಹ್ಮಣ ಸಂಘದ ವತಿಯಿಂದ ಇದೇ ತಿಂಗಳು 24 ರಂದು ಬಂಟ್ವಾಳದ ಶ್ರೀ ಮಂಜುನಾಥ ಸ್ವಾಮಿ ಸಭಾಭವನದಲ್ಲಿ 27ನೇ ವಾರ್ಷಿಕ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಸುಮಾರು 750ಕ್ಕೂ ಮಿಕ್ಕಿ ಫಲಾನುಭವಿಗಳು ಹೆತ್ತವರು ಹಾಗೂ ಪೋಷಕರು ಭಾಗವಹಿಸಿದ್ದರು .ಈ ಸಂದರ್ಭದಲ್ಲಿ ಮುಂಬಯಿಯ ಬಾಭಾ ಆಟೋಮಿಕ್ ರಿಸರ್ಚ್ ಸೆಂಟರ್ ನ ನಿವೃತ್ತ ಅಧಿಕಾರಿ ಅನಿಲ್ ಅಚ್ಯುತ ನಾಯಕ್ ಮುಂಬಯಿ ಸಭೆಯನ್ನು ಉದ್ದೇಶಿಸಿ ಸರ್ಕಾರದ ಮೀಸಲಾತಿ ಯಾವುದೇ ಸವಲತ್ತು ಇಲ್ಲದ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲಾ ರೀತಿಯ ಉನ್ನತ ಶಿಕ್ಷಣಗಳು ದೊರಕುವಂತೆ ಪ್ರೇರಣೆ ಮಾತ್ರವಲ್ಲ ವಿದ್ಯಾರ್ಥಿ ವೇತನವನ್ನು ನೀಡುತ್ತಿರುವ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದಂತಹ ಸಂಘಟನೆಗಳು ಉತ್ತಮ ಕಾರ್ಯಗಳನ್ನು ಮಾಡುತ್ತಿವುದು ಅತ್ಯಂತ ಶ್ಲಾಘನೀಯ. ವಿದ್ಯಾರ್ಥಿ ಜೀವನವು ಭರವಸೆಯಿಂದ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ನಾಯಕತ್ವ ಗುಣಗಳ ಜೊತೆಗೆ ಸವಾಲುಗಳನ್ನು ಎದುರಿಸುವ ಶಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಇದಕ್ಕಾಗಿ ಕೌಶಲ್ಯಗಳನ್ನು ಶಿಕ್ಷಣದ ಜೊತೆಯಲ್ಲಿ ಬೆಳೆಸಿಕೊಳ್ಳಬೇಕು ಎಂಬ ಹಿತನುಡಿಗಳನ್ನು ನುಡಿದರು. ಸಂಘ ಸಂಸ್ಥೆಗಳು ಅರ್ಹ ವಿದ್ಯಾರ್ಥಿಗಳಿಗೆ ಧೈರ್ಯವನ್ನು ತುಂಬುವ ಆತ್ಮವಿಶ್ವಾಸವನ್ನು ಬೆಳೆಸುವ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾ ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳನ್ನು ಆಯೋಜಿಸಿಕೊಂಡು ಬರುತ್ತಿರುವುದು ನಿಜವಾಗಿಯೂ ಅತ್ಯುತ್ತಮ ಸೇವಾ ಕಾರ್ಯವಾಗಿದೆ ಎಂದು ಹೇಳುತ್ತಾ ಫಲಾನುಭವಿಗಳಿಗೆ ಶುಭಾಶಯಗಳನ್ನು ನೀಡುತ್ತಾ ಹಾರೈಸಿದರು.

ಬೆಂಗಳೂರಿನ ಯುನಿಸಿಸ್ ಗ್ಲೋಬಲ್ ಸರ್ವಿಸಸ್ ಕಾರ್ಯನಿರ್ವಾಹಕರಾದ ನಂದಕಿಶೋರ್ ಬಾಯಿಲ ಮಾತನಾಡುತ್ತಾ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರೆದು ಸಿಕ್ಕ ಅವಕಾಶಗಳನ್ನೆಲ್ಲ ಬಳಸಿಕೊಂಡು ಧೈರ್ಯದಿಂದ ಗುರಿ ಮುಟ್ಟಲು ಪ್ರಯತ್ನಿಸಬೇಕು ಛಲ, ಬದ್ಧತೆ, ಸಮಯಪ್ರಜ್ಞೆ ಮತ್ತು ಕಠಿಣ ಪರಿಶ್ರಮ ನಿತ್ಯ ನಿರಂತರವಾಗಿ ಮುಂದುವರಿಸಬೇಕು. ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಗಳಿಸಿಕೊಳ್ಳುವುದರಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ಅವಿರತವಾಗಿ ಶ್ರಮ ವಹಿಸುತ್ತಾ ಬಂದಿದೆ. ಇಂತಹ ಪುಣ್ಯ ಕಾರ್ಯದಲ್ಲಿ ನಮ್ಮ ದೇಣಿಗೆಯು ಖಂಡಿತಾ ಅಳಿಲು ಸೇವೆಯಂತಿದೆ ಈ ಕಾರ್ಯಕ್ರಮ ವಿದ್ಯಾಭಿಮಾನಿಗಳಿಂದ ಹಾಗೂ ದಾನಿಗಳಿಂದ ಸೇವಾ ರೂಪದಲ್ಲಿ ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಬನ್ನೂರು ಉಮೇಶ್ ಪ್ರಭು ಅವರು ದೇವರಲ್ಲಿ ಭಕ್ತಿಯನ್ನು ಗುರುಹಿರಿಯರಿಗೆ ಗೌರವವನ್ನು ನೀಡುತ್ತಾ ಸಂಸ್ಕಾರಯುತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲಾ ಅಡೆ-ತಡೆಗಳನ್ನು ಸವಾಲುಗಳನ್ನು ಎದುರಿಸಿ ತನ್ನ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಬದುಕನ್ನು ಸುಂದರಗೊಳಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು. ಕೆಎಂಸಿ ಆಸ್ಪತ್ರೆ ಮಣಿಪಾಲದ ಎಚ್ಆರ್ ಮ್ಯಾನೇಜರ್ ಸುಚೇತ ನಾಯಕ್ ವಿದ್ಯಾರ್ಥಿಗಳಿಗೆ ಶುಭನುಡಿಗಳೊಂದಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಪ್ರತಿಷ್ಠಾನದ ಸಂಚಾಲಕರಾದ ಡಿ. ರಮೇಶ ನಾಯಕ್ ಮೈರಾ ಪ್ರತಿವರ್ಷ ಈ ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ಅತ್ಯಂತ ಸರಳತೆಯಿಂದ ,ಉಲ್ಲಾಸದಿಂದ ಹಾಗೂ ಸಂಭ್ರಮದಿಂದ ಸಮಾಜದ ಎಲ್ಲಾ ವರ್ಗದ ಜನರು ಸೇರಿ ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಭವಿಷ್ಯದಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮುಂದುವರಿಯಲಿ ‌ಎಂದು ಸಂಘಟಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದುವರೆದು
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡುತ್ತಾ ತಮ್ಮ ಕಾರ್ಯಕ್ರಮಗಳಿಗೆ ಸರ್ವ ವಿಧದಲ್ಲೂ ಸಹಾಯ, ಸಹಕಾರಗಳನಿತ್ತ ಮಹನೀಯರನ್ನು ಸ್ಮರಿಸಿದರು. ಅಂತೆಯೇ ಈ ಕಾರ್ಯಕ್ರಮವನ್ನು ತಮ್ಮ ಮನೆಯ ಸ್ವಂತ ಕಾರ್ಯಕ್ರಮವೆಂಬಂತೆ ಮನಗಂಡು ಸಮಾಜದ ಹಿರಿಯರು, ಮಹಿಳೆಯರು ಆಗಮಿಸಿ ಯಶಸ್ಸಿಗೊಳಿಸಿಕೊಟ್ಟ ಎಲ್ಲರಿಗೂ ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದರು. ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗೈದ ಹಲವಾರು ಸಾಧಕರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಮುಖ್ಯವಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚೇರ್ಕಾಡಿ ಮಂಜುನಾಥ ಪ್ರಭು,ಕೃಷಿ ಕ್ಷೇತ್ರದಲ್ಲಿ ಕೋರ್ದೊಟ್ಟು ನಾರಾಯಣ ಪ್ರಭು, ಹೈನುಗಾರಿಕೆಯಲ್ಲಿ ಹೀರ್ತೋಟ್ಟು ಕೃಷ್ಣ ಪ್ರಭು, ಮುಂಬಯಿಯ ಬಾಭಾ ಆಟೋಮೆಟಿಕ್ ರಿಸರ್ಚ್ ಸೆಂಟರ್ ನ ನಿವೃತ್ತ ಅಧಿಕಾರಿ ಅನಿಲ್ ಅಚ್ಚುತ ನಾಯಕ್, ಅಭಿವೃದ್ಧಿ ಬಿಲ್ಡರ್ಸ್ ನ ಅಧ್ಯಕ್ಷರಾದ ಜಯಂತ ನಾಯಕ್ , ಸಹಕಾರಿ ಕ್ಷೇತ್ರದಲ್ಲಿ ಕಸ್ತೂರಿ ಮೋಹನ್ ಪ್ರಭು, ಪ್ರದೀಪ್ ನಾಯಕ್ ಬಲ್ಕತ್ಯಾರು , ಸುಜಾತ ಸಾಮಂತ್,ಬಜಪ್ಪಾಲು ವಾಸುದೇವ ಭಟ್ , ಗೋಪಾಲ ಸಾಮಂತ್ ಮೈರಾ, ಸುಶೀಲಾ ಗಣಪತಿ ನಾಯಕ್ ಪರ್ಕಳ, ಡಾ. ಸಂಗೀತ ಮುರಳೀಧರ ಪ್ರಭು, ಅಕ್ಷತಾ ನಾಯಕ್, ವಾಸುದೇವ ಪ್ರಭು ಮಾರಿ ಬೆಟ್ಟು, ಸಿಎ ರೋಹನ್ ಕೆ., ಯಶವಂತ ನಾಯಕ್ ಮರಮ, ಜ್ಞಾನೇಶ್ ಬೋಳಂಗಡಿ, ವಾಸುದೇವ ಭಟ್ಟ್ ಮುಂತಾದವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರು ವಿಜಯ ಶೆಣೈ ಕೊಡಂಗೆ, ದ.ಕ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಶೆಣೈ ಕೂಡಿಬೈಲು ಹಾಗೂ ಎರಡೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ದಯಾನಂದ ನಾಯಕ್ ಅವರು ಸ್ವಾಗತಿಸಿದರು. ಮುರಳಿಧರ ಪ್ರಭು ವಗ್ಗ ವಂದಿಸಿದರು. ದ . ಕ. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ತಂಗಡಿ ದಯಾನಂದ ನಾಯಕ್ ಹಾಗೂ ಡಾ. ವಿಜಯಲಕ್ಷ್ಮಿ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಧರ್ಮಸ್ಥಳ : ನೇರ್ತನೆಯಲ್ಲಿ ದನದ ಕರುವಿನ ಮೇಲೆ ಚಿರತೆ ದಾಳಿ

Suddi Udaya

ಉಡುಪಿ:ಐದನೇ ರಾಷ್ಟ್ರೀಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್ ಶಿಪ್

Suddi Udaya

2000 ರೂ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಆರ್ ಬಿಐ ಸೂಚನೆ

Suddi Udaya

ವಿಧಾನ ಸಭಾ ಚುನಾವಣೆ: ಬಿಜೆಪಿ ಪ್ರಥಮ ಪಟ್ಟಿ ಬಿಡುಗಡೆ- ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ ಹಾಲಿ ಶಾಸಕ ಹರೀಶ್ ಪೂಂಜ ಹೆಸರು ಘೋಷಣೆ

Suddi Udaya

ಮೂಡಿಗೆರೆ ರಾಣಿಝರಿ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ಹುಚ್ಚಾಟ: ಬೈಕ್ ಸಹಿತ ಉಜಿರೆಯ ಐವರು ಯುವಕರನ್ನು ಬಂಧಿಸಿದ ಪೊಲೀಸರು

Suddi Udaya

ಮುಂದುವರಿದ ಧಾರಾಕಾರ ಮಳೆಜು: 20ರ ಶನಿವಾರ ಶಾಲಾ ಕಾಲೇಜುಗಳಿಗೆ ರಜೆ

Suddi Udaya
error: Content is protected !!