September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನ.30: ಬಜಿರೆ ಹೊಸಪಟ್ಣ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಹಾಗೂ ಸತ್ಯನಾರಾಯಣ ಭಜನಾ ಮಂಡಳಿ ಆಶ್ರಯದಲ್ಲಿ ಹೊನಲು ಬೆಳಕಿನ ಪುರುಷರ 60 ಕೆ.ಜಿ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟ

ಬಜಿರೆ: ಹೊಸಪಟ್ಣ ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್, ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಹಾಗೂ ಸತ್ಯನಾರಾಯಣ ಭಜನಾ ಮಂಡಳಿ ಇದರ ಆಶ್ರಯದಲ್ಲಿ ಕ್ಲಬ್‌ನ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳ ಸಹಾಯಾರ್ಥವಾಗಿ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಇದರ ಸಹಯೋಗದಲ್ಲಿ ಹೊನಲುಬೆಳಕಿನ ಪುರುಷರ 60 ಕೆ.ಜಿ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟ ನ.30 ರಂದು ಹೊಸಪಟ್ಣ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ವಠಾರದಲ್ಲಿ ಸಂಜೆ ಗಂಟೆ 8 ಕ್ಕೆ ಜರಗಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಅಧ್ಯಕ್ಷ ರಕ್ಷಿತ್ ಶಿವರಾಮ್ ವಹಿಸಲಿದ್ದಾರೆ. ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.


ಸಾಧಕರಿಗೆ ಸನ್ಮಾನ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ಚಂದ್ರ ಸಾಲ್ಯಾನ್ ಇರುವೈಲು ಪಾಣಿಲ, ಬೆಳ್ತಂಗಡಿ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮುಖ್ಯ ತೀರ್ಪುಗಾರ ಪ್ರಭಾಕರ ನಾರಾವಿ, ವೇಣೂರು ಮೆಸ್ಕಾಂ ಇಲಾಖೆಯ ಮುಸ್ತಾಫ, ವಿಸ್ತಾರ ಡಿಜಿಟಲ್ ಮಾಧ್ಯಮದ ನಿರೂಪಕಿ ಕು. ರಕ್ಷಾ ಜಾರಿಗೆದಡಿ, ನುರಿತ ಮರದ ಕೆತ್ತನೆಗಳ ಶಿಲ್ಪಿ ಮತ್ತು ಕಂಬಳ ಓಟಗಾರ ವಿಶ್ವನಾಥ ಆಚಾರ್ಯ ಹಿದ್ದೆಕ್ಯಾರು, ರಾಷ್ಟ್ರಮಟ್ಟದ ಮಹಿಳಾ ಕಬಡ್ಡಿ ಆಟಗಾರ್ತಿ ಕು| ಅನನ್ಯ ಆನಂದ ಪೂಜಾರಿ, ಕಂಬಳ ಓಟದ ಕೋಣಗಳ ಯಜಮಾನ ಗಣೇಶ್ ನಾರಾಯಣ ಪಂಡಿತ್, ಜನಪ್ರಿಯ ಪಶು ಚಿಕಿತ್ಸಕ ಪ್ರದೀಪ್ ಶೆಟ್ಟಿ, ಯಕ್ಷಗಾನ ಕಲಾವಿದ ಸತೀಶ್ ನಯನಾಡು, ಕಿರುತೆರೆಯ ಖ್ಯಾತ ನೃತ್ಯ ಕಲಾವಿದೆ ಕು| ಆಪ್ತಿ ಪೂಜಾರಿ, ರಾಷ್ಟ್ರೀಯ ಕಬಡ್ಡಿ ಆಟಗಾರ ಸುಶಾಂತ್ ಶೆಟ್ಟಿ, ಸಿ.ಎ. ಇಂಟರ್ ಮಿಡಿಯೇಟ್ ರ್‍ಯಾಂಕ್ ವಿದ್ಯಾರ್ಥಿ ದೀಪಕ್ ಹೆಗ್ಡೆ ಇವರನ್ನು ಗೌರವಿಸಲಾಗುವುದು.

ಪ್ರವೇಶ ಶುಲ್ಕ ರೂ.500/, ಬಹುಮಾನಗಳು ಪ್ರಥಮ ರೂ. 15,555/- ಹಾಗೂ ಶ್ರೀ ಸತ್ಯನಾರಾಯಣ ಟ್ರೋಫಿ, ದ್ವಿತೀಯ ರೂ. 10,555/- ಹಾಗೂ ಟ್ರೋಫಿ, ತೃತೀಯ ರೂ. 5,555/- ಹಾಗೂ ಟ್ರೋಫಿ, ಚತುರ್ಥ ರೂ. 5,555/- ಹಾಗೂ ಟ್ರೋಫಿ.

ಸಮಾರೋಪ ಸಮಾರಂಭವು ಡಿ.1ರಂದು ಬೆಳಿಗ್ಗೆ ಜರಗಲಿದೆ ಎಂದು ಸ್ಥಾಪಕಾಧ್ಯಕ್ಷ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ರಮೇಶ್ ಕುಡ್ಮೇರು, ಗೌರವಾಧ್ಯಕ್ಷ ಪ್ರವೀಣ್ ಕುಮಾರ್ ಜಾರಿಗೆದಡಿ, ಅಧ್ಯಕ್ಷ ಕಿಶೋರ್ ಕುಮಾರ್ ಕಾರ್ಯದರ್ಶಿ ಮೋಹನ್ ಬಿ.ಸಿ ಹೊಸಪಟ್ಣ ತಿಳಿಸಿದ್ದಾರೆ.

Related posts

ಬೆಳ್ತಂಗಡಿ ಮುಳಿಯ ಜ್ಯುವೆಲರ್ಸ್ ವತಿಯಿಂದ ಎಸ್‌ಎಸ್‌ಎಲ್‌ಸಿ ಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ತನುಶ್ರೀ ರವರಿಗೆ ಸನ್ಮಾನ

Suddi Udaya

ಇಂದಬೆಟ್ಟು: ಸ. ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಕಾಯರ್ತಡ್ಕ : ಯುವತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಧರ್ಮಸ್ಥಳ: ಶ್ರೀ ಮಂ.ಸ್ವಾ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಎಸ್‌.ಡಿ.ಸಿ.ಸಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಗೋವಾದಲ್ಲಿ ಯಕ್ಷ ಕಲರವ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ

Suddi Udaya
error: Content is protected !!