25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ಬಂದಾರು ಗ್ರಾಮದ ಪೆರಲ್ದಪಳಿಕೆಯಲ್ಲಿ 9ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ

ಬಂದಾರು: ಬಂದಾರು ಗ್ರಾಮದ ಪೆರಲ್ದಪಳಿಕೆ ಶ್ರೀಮತಿ ಗೌರಿ ಸುಂದರ ಗೌಡ ರವರ ನಿವಾಸದಲ್ಲಿ ಕಾಳಿಂಗ ಸರ್ಪವೊಂದು ಡಿ.1ರಂದು ಪತ್ತೆಯಾಗಿದೆ.

ನ.30 ರಂದು ರಾತ್ರಿ 7 ಗಂಟೆಯ ಸುಮಾರಿಗೆ ಮನೆಯ ಮುಂಭಾಗದಲ್ಲಿ ಸ್ವಚ್ಛ ಗೊಳಿಸುತ್ತಿರುವಾಗ ಹಾವೊಂದು ಗೋಚರಿಸುತ್ತದೆ ಗೌರಿ ಅವರು ಕೇರೆ ಹಾವು ಎಂದು ಭಾವಿಸಿ ತನ್ನ ಮನೆಯ ಅಂಗಳದ ಸ್ವಚ್ಛತೆ ಯನ್ನು ಮುಗಿಸಿ ತಮ್ಮ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಮರುದಿನ ಡಿ.1 ರಂದು ಬೆಳಗ್ಗೆ 8 ಗಂಟೆಯ ಸಮಯದಲ್ಲಿ ನೋಡಿದರೂ ಹಾವು ಅದೇ ಸ್ಥಳದಲ್ಲಿರುವುದನ್ನು ಕಂಡು ಭಯಭೀತರಾಗಿ ತನ್ನ ಮನೆ ಯಲ್ಲಿ ಹಾಗೂ ನೆರೆ ಹೊರೆಯ ಮನೆಯವರಲ್ಲಿ ಮಾಹಿತಿ ನೀಡಿದರು, ಗಮನಿಸಿದಾಗ ಕಾಳಿಂಗ ಸರ್ಪವೆಂದು ತಿಳಿದು, ತಕ್ಷಣವೇ ಉಪ್ಪಿನಂಗಡಿಯ ನಿವಾಸಿಯಾದ ಸ್ನೇಕ್ ಝಕಾರಿಯ ಇವರನ್ನು ಸಂಪರ್ಕಿಸಲಾಯಿತು ತಕ್ಷಣ ಅವರು ಸ್ಥಳಕ್ಕೆ ಧಾವಿಸಿ ಜಾಣ್ಮೆಯಿಂದ ಹಾವನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿ ಪಡೆದು ಪೆರಿಯಶಾಂತಿ ಬಳಿ ಕಾಡಿಗೆ ಬಿಟ್ಟಿರುವ ಬಗ್ಗೆ ವರದಿಯಾಗಿದೆ.

ಸ್ನೇಕ್ ಝಕಾರಿಯ ಅವರ ಹೇಳಿಕೆಯ ಪ್ರಕಾರ ಈ ಹಾವು ಸುಮಾರು 9 ಅಡಿ ಉದ್ದವಿದ್ದು ಅಂದಾಜು ಒಂದುವರೆ ವರುಷದ ಹಾವು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು ಸಹಕರಿಸಿದರು.

Related posts

ಶಿಬಾಜೆ: ಕಟ್ಟಿಗೆ ತರಲೆಂದು ಹೋದವರು ಮನೆಗೆ ಹಿಂತಿರುಗಿ ಬಾರದೆ ನಾಪತ್ತೆ

Suddi Udaya

ಜೆಸಿಐ ವಲಯ ಮಧ್ಯಂತರ ಸಮ್ಮೇಳನ: ಭಾಷಣ ಸ್ಪರ್ಧೆಯಲ್ಲಿ ಕು. ಕನ್ನಿಕಾರಿಗೆ ದ್ವಿತೀಯ ಸ್ಥಾನ

Suddi Udaya

ಬಂದಾರು ಗ್ರಾ.ಪಂ. ನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣಾ ಕಾರ್ಯಕ್ರಮ – ಜನಸುರಕ್ಷಾ ಯೋಜನೆಗಳ ಸಂಪೂರ್ಣತಾ ಅಭಿಯಾನ

Suddi Udaya

ಬೆಳ್ತಂಗಡಿ ಶ್ರೀ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಜಾತ್ರೋತ್ಸವ

Suddi Udaya

ಮುಂಡಾಜೆ: ವಿರಾಟ್ ಹಿಂದೂ ಸೇವಾ ಸಂಘದ ವತಿಯಿಂದ ಅರ್ಹ ಫಲಾನುಭವಿಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ

Suddi Udaya
error: Content is protected !!