29.5 C
ಪುತ್ತೂರು, ಬೆಳ್ತಂಗಡಿ
April 5, 2025
ಪ್ರಮುಖ ಸುದ್ದಿ

ಚಂಡಮಾರುತ ಸೂಚನೆ – ನಾಳೆ ಶಾಲಾ – ಪಿಯು ಕಾಲೇಜುಗಳಿಗೆ ರಜೆ

ಬೆಳ್ತಂಗಡಿ : ಭಾರತೀಯ ಹವಾಮಾನ ಇಲಾಖೆಯು ನೀಡಿದ ಹವಾಮಾನದ ಮುನ್ಸೂಚನೆಯಂತೆ ಬಂಗಾಲ ಕೊಲ್ಲಿ ಸಮುದ್ರದಲ್ಲಿ ಫೆಂಗಲ್ ಚಂಡ ಮಾರುತ ಉಂಟಾಗಿರುವ ಪರಿಣಾಮದಿಂದ ಕರಾವಳಿ ಜಿಲ್ಲೆಯಾದ್ಯಂತ ಡಿ.2 ರಿಂದ ಡಿ. 8 ತನಕ ಗುಡುಗು ಸಹಿತ ಭಾರೀ ಮಳೆಯಾಗಲಿದ್ದು ಆರೆಂಜ್ ಅಲರ್ಟ್‌ ಘೋಷಿಸಿದ್ದಾರೆ.

ನಾಳೆ ಡಿಸೆಂಬ‌ರ್ 3ರಂದು ಮಳೆ ಇನ್ನಷ್ಟು ತೀವ್ರತೆ ಪಡೆಯಲಿದ್ದು ಜಿಲ್ಲಾಡಳಿತ ಎಚ್ಚರಿಕೆಯ ಸೂಚನೆ ನೀಡಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಕಡಲ ತೀರ, ತಗ್ಗು ಪ್ರದೇಶಗಳಿಗೆ ತೆರಳದಂತೆ ಹಾಗೂ ಮೀನುಗಾರರು ನದಿ ಸಮುದ್ರಗಳಿಗೆ ತೆರಳದಂತೆ ಸೂಚನೆ ನೀಡಿದ್ದಾರೆ.
ಯಾವುದೇ ವಿಪತ್ತು ಸಂಭವಿಸಿದ್ರೂ ಜಿಲ್ಲಾಡಳಿತದ ಸಹಾಯವಾಣಿಗೆ ಕರೆ ಮಾಡಿ ತಿಳಿಸುವಂತೆ ಸಲಹೆ ನೀಡಿದ್ದಾರೆ. ಕೇಂದ್ರ ಹವಾಮಾನ ಕೇಂದ್ರ ರೆಡ್ ಅಲರ್ಟ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪಿಯುಸಿ ತನಕ
ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ನಾಳೆ (ಡಿಸೆಂಬರ್ 3) ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ರಜೆ ಘೋಷಿಸಿದ್ದಾರೆ.

Related posts

ಬಳಂಜ:ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾಗಿ ಶರತ್ ಅಂಚನ್ ಆಯ್ಕೆ

Suddi Udaya

ಬೆಳ್ತಂಗಡಿ ಖಿಲರ್ ಜುಮ್ಮಾ ಮಸೀದಿಯಲ್ಲಿ ಮಿಲಾದ್ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ

Suddi Udaya

ಲಾಯಿಲ ಕರ್ನೋಡಿ ಸ.ಹಿ.ಪ್ರಾ. ಶಾಲೆಯಲ್ಲಿ ಸಂವಿಧಾನ ಆಚರಣೆ

Suddi Udaya

ಜ.15: ಮಾಜಿ ಶಾಸಕ ದಿ| ಕೆ. ವಸಂತ ಬಂಗೇರರ 79ನೇ ಹುಟ್ಟುಹಬ್ಬದ ಪ್ರಯುಕ್ತ ‘ಬೃಹತ್ ರಕ್ತದಾನ’ ಶಿಬಿರ

Suddi Udaya

ಮಾ.16: ಹೊಕ್ಕಾಡಿಗೋಳಿ ವೀರ – ವಿಕ್ರಮ ಕಂಬಳ: ಕೊಡಂಗೆಯಲ್ಲಿ ಶಾಶ್ವತ ಕರೆಗೆ ಭೂಮಿಪೂಜೆ

Suddi Udaya

ಗುರುವಾಯನಕೆರೆ: ಮಹಿಳೆಗೆ ಜೀವಬೆದರಿಕೆ, ಹಲ್ಲೆ ಆರೋಪ: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ