December 5, 2024
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಡಿ. 7 :ಪದ್ಮುಂಜದಲ್ಲಿ ಮ್ಯಾರಥಾನ್ ಯೋಗ ತರಬೇತಿ ಶಿಬಿರ

ಪದ್ಮುಂಜ: ಪ್ರಾಥಮಿಕ ಕೃಷಿ ಉತ್ಪನ್ನ ಸಹಕಾರಿ ಸಂಘ ಪದ್ಮುಂಜ ಇದರ ವಠಾರದಲ್ಲಿ ಆವಿಷ್ಕಾರ ಯೋಗ ಮಂಗಳೂರು ಹಾಗೂ ಸಹ ಸಂಘಟನೆಗಳ ಸಹಯೋಗದಲ್ಲಿ 12 ಗಂಟೆಗಳ (ತಲಾ 1.30 ಗಂಟೆಯ 8 ಬ್ಯಾಚ್‌ನಲ್ಲಿ) ಮ್ಯಾರಥಾನ್ ಯೋಗ ತರಬೇತಿ ಶಿಬಿರವು ಡಿ. 7, ಶನಿವಾರ ಬೆಳಿಗ್ಗೆ, 6 ರಿಂದ ಸಂಜೆ 7 ಗಂಟೆಯ ವರೆಗೆ ನಡೆಯಲಿದೆ.

ಯೋಗ ಚಿಕಿತ್ಸಕ ವಿಶ್ವದಾಖಲೆಯ ಖ್ಯಾತಿಯ ಯೋಗ ತರಬೇತುದಾರ ಕುಶಾಲಪ್ಪ ಗೌಡ ನೆಕ್ಕರಜೆ ಇವರು ನಿರಂತರ 12 ಗಂಟೆಗಳಲ್ಲಿ ತರಬೇತಿ ನೀಡಲಿರುವರು. ತಲಾ 1 2 ಗಂಟೆಗಳ ತರಬೇತಿಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿರುವುದು. ತರಬೇತಿಯ ಅವಧಿಯಲ್ಲಿ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯಕ್ಕೆ ಪೂರಕವಾದ ಯೋಗಾಸನ, ಕ್ರಿಯೆ, ಪ್ರಾಣಾಯಾಮ, ವಿಶ್ರಾಂತಿ ಹಾಗೂ ಧ್ಯಾನದ ತರಬೇತಿ ನೀಡಲಾಗುವುದು. ತರಬೇತಿಗೆ ಭಾಗವಹಿಸುವ ಎಲ್ಲರಿಗೂ ಉಚಿತವಾಗಿ ಯೋಗ ಕ್ಯಾಲೆಂಡರ್ ಶೈಕ್ಷಣಿಕ ಸಾಮಾಗ್ರಿ, ಪ್ರಮಾಣ ಪತ್ರ ಹಾಗೂ ನಿತ್ಯ ಅಭ್ಯಾಸಕ್ಕೆ ಶಿಬಿರದಲ್ಲಿ ತರಬೇತಿ ನೀಡಿದ ಯೋಗ ವೀಡಿಯೋ ಲಿಂಕ್ ನೀಡಲಾಗುವುದು. ಶಿಬಿರದ ಸಂದರ್ಭದಲ್ಲಿ ಅಷ್ಟಾಂಗ ಯೋಗ ಸಿದ್ಧಾಂತ ತರಗತಿ ಹಾಗೂ ಆರೋಗ್ಯ ಸಮಸ್ಯೆಗೆ ಚಿಕಿತ್ಸಾತ್ಮಕ ಯೋಗದ ಮಾರ್ಗದರ್ಶನ ನೀಡಲಾಗುವುದು.

13 ಸಂಘಟನೆಗಳು ಬಾಗಿ : ಯೋಗ ವಿದ್ಯೆಯನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸಲು ಸಾಮಾಜಿಕ ಚಟುವಟಿಕೆಯು 13 ಸಂಘಟನೆಗಳು ಎಂಟು ಅವಧಿಯ ಪ್ರಾಯೋಜಕರಾಗಿ ಹಾಗೂ ಸಂಘಟಕರಾಗಿ ಭಾಗಿಯಾಗುತ್ತಿದೆ. ಬೆಳಿಗ್ಗೆ 6 ರಿಂದ 8 ಮೊದಲನೆ ಅವಧಿ ವಿಶ್ವ ಹಿಂದು ಹಾಗೂ ಸಂಘಟಕರಾಗಿ ಭಾಗಿಯಾಗುತ್ತಿದೆ. ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಪದ್ಮುಂಜ ಘಟಕ, ಬೆಳಿಗ್ಗೆ 8 ರಿಂದ 9.30 ರ 2ನೇ ಅವಧಿಯನ್ನು ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘ 3ನೇ ಅವಧಿ ಬೆಳಿಗ್ಗೆ 9.30 ರಿಂದ 11 ಜ್ಞಾನ ಜ್ಯೋತಿ ಯುವಕ ಮಂಡಲ ಅಡೆಂಜ, 4ನೇ ಅವಧಿ ಬೆಳಿಗ್ಗೆ 11 ರಿಂದ 12.30 ಕ್ಕೆ ನಡೆಯುವ ಬ್ಯಾಚನ್ನು ಟೀಮ್ ನವಕೇಸರಿ ಮುಲೆಂಗಲ್ಲು ಹಾಗೂ ಯುವ ವೇದಿಕೆ ಮುಗೇರಡ್ಕ ಮೊಗ್ರು, ಮಧ್ಯಾಹ್ನ 12.30 ರಿಂದ 2ರ ಐದನೇ ಅವಧಿಯನ್ನು ಶ್ರೀ ಚಾಮುಂಡೇಶ್ವರಿ ಯುವಕ ಮಂಡಲ(ರಿ.) ಮುಂಡೂರು ಆರನೇ ಅವಧಿ ಮಹಿಳೆಯರಿಗೆ ವಿಶೇಷ ಅವಧಿ ಮಧ್ಯಾಹ್ನ 2 ರಿಂದ 3.30ಕ್ಕೆ ಪಾಂಚಜನ್ಯ ಗೆಳೆಯರ ಬಳಗ, ವಿಷ್ಣುನಗರ ಪಾಂಜಳ, ಶ್ರೀ ಚಕ್ರ ಗೆಳೆಯರ ಬಳಗ (ರಿ) ಬಂದಾರು ನೇತೃತ್ವದಲ್ಲಿ ನಡೆಯಲಿದೆ. ಏಳನೇ ಅವಧಿಯು ಸಂಜೆ 3.30ರಿಂದ 5ರವರೆಗೆ ಜೈ ಶ್ರೀರಾಮ್ ಗೆಳೆಯರ ಬಳಗ, ಶ್ರೀ ರಾಮನಗರ ಬಂದಾರು ಹಾಗೂ ಶ್ರೀ ವಿಷ್ಣು ಅಸೋಸಿಯೇಟ್ಸ್ ಇದರ ಸಹಯೋಗದಲ್ಲಿ ಕೊನೆಯ 8ನೇ ಅವಧಿ ಸಂಜೆ 5.00 ರಿಂದ 6.30ರ ವರೆಗೆ ಶ್ರೀ ಸದಾಶಿವ ಭಜನಾ ಮಂಡಳಿ (ರಿ) ಕುರಾಯ ಹಾಗೂ ಮೂವರು ದೈವಗಳ ದೈವಸ್ಥಾನ ಮುಗೇರಡ್ಕ, ಶ್ರೀ ದುರ್ಗಾನುಗ್ರಹ ಭಜನಾ ಮಂದಿರ ಮುಗೇರಡ್ಕ, ಮೊಗ್ರು ಇದರ ನೇತೃತ್ವದಲ್ಲಿ ನಡೆಯಲಿದೆ.

ಗಣ್ಯರ ಉಪಸ್ಥಿತಿಯಲ್ಲಿ ಸಂಜೆ 6.30ಕ್ಕೆ ಸಮಾರೋಪ ನಡೆಯಲಿದೆ. ಸರಕಾರಿ ಶಾಲಾಭಿವೃದ್ಧಿಗೆ ದೇಣಿಗೆಗಾಗಿ ಯೋಗ ಶಿಬಿರ ಶಿಬಿರಾರ್ಥಿಗಳಿಂದ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್(ರಿ) ಮೊಗ್ರು ಇದರ ವಿದ್ಯಾನಿಧಿಗೆ ದೇಣಿಗೆಯನ್ನು ಸ್ವೀಕರಿಸಲಾಗುವುದು. ಸಂಗ್ರಹವಾದ ಮೊತ್ತ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಇದರ ಅಭಿವೃದ್ಧಿಗೆ ಬಳಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ 9845588740, 9591130105 ಸಂಪರ್ಕಿಸಿ ಹಾಗೂ https://forms.gle/waVSEt2wew9yZkCk9 ಈ ಲಿಂಕ್ ನ ಮೂಲಕ ನೊಂದಯಿಸಿಕೊಳ್ಳಬಹುದು.

Related posts

ನಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya

ಎಸ್.ಡಿ.ಪಿ.ಐ ಕುವೆಟ್ಟು ಬ್ಲಾಕ್ ಸಮಿತಿ ವತಿಯಿಂದ ರಸ್ತೆ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ

Suddi Udaya

ಮಚ್ಚಿನ ಅನಂತೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದ ವತಿಯಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಫಿನೈಲ್ ಹಾಗೂ ಸೋಪ್ ಆಯಿಲ್ ತರಬೇತಿ

Suddi Udaya

ಬಿ.ವಿ.ಎಫ್. ಬೆಳ್ತಂಗಡಿ ತಾ. ಘಟಕದಿಂದ ’ಭಾರತೀಯ ಸಂವಿಧಾನ ದಿನಾಚರಣೆ’

Suddi Udaya

ಬೆಳ್ತಂಗಡಿ ಯುವವಾಹಿನಿಯಿಂದ ‘ತುಳುನಾಡ ತುಡರ ಪರ್ಬ ‘

Suddi Udaya

ಪ್ರೊ. ನಾವುಜಿರೆ ನಿಧನಕ್ಕೆ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಯದುಪತಿ ಗೌಡರಿಂದ ಸಂತಾಪ

Suddi Udaya
error: Content is protected !!