ಅಂಡಿಂಜೆ ಶಾಲೆಯ ಭೋಜನಾಲಯ ಹಾಗೂ ಸಭಾ ಭವನ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ! ಡಿ. ವೀರೇಂದ್ರ ಹೆಗ್ಗಡೆಯವರು ರೂ.150000/ ಅನುದಾನ ಮಂಜೂರಾತಿ ನೀಡಿದ್ದು ಮಂಜೂರಾತಿ ಪತ್ರ ವಿತರಣೆಯನ್ನು ವೇಣೂರು ವಲಯ ಮೇಲ್ವಿಚಾರಕಿ ಶ್ರೀಮತಿ ಶಾಲಿನಿ ಮತ್ತು ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರು ಮೋಹನ್ ಅಂಡಿ0ಜೆ ಇವರು ಶಾಲಾ ಸಮಿತಿಯವರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಶಿವಶಂಕರ್ ಭಟ್ , ಎಸ್ ಡಿ ಎಂ ಸಿ ಅಧ್ಯಕ್ಷ ರಮೇಶ್ ಬಂಗೇರ ಮತ್ತು ಶಾಲಾ ಎಲ್ಲಾ ಶಿಕ್ಷಕ ವೃಂದದವರು, ಆನಂದ ಕುಲಾಲ್ ವಿನಾಯಕ ಭಜನಾ ಮಂಡಳಿಯ ಅಧ್ಯಕ್ಷರು , ಪ್ರಗತಿ ಬಂಧು ಎ ಮತ್ತು ಬಿ ಒಕ್ಕೂಟದ ಅಧ್ಯಕ್ಷರು ಯಶೋಧರ ಮತ್ತು ಸುಲೋಚನ, ಸೇವಾಪ್ರತಿನಿಧಿ ಭಾಗ್ಯ, ಒಕ್ಕೂಟದ ಕಾರ್ಯದರ್ಶಿ, ಪಂಚಾಯತ್ ಸದಸ್ಯ ಸುರೇಶ್, ಪದಾಧಿಕಾರಿಗಳು ಉಪಸ್ಥಿತರಿದ್ದರು.