December 4, 2024
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಇಂದಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾ , ಉಪಾಧ್ಯಕ್ಷರಾಗಿ ಶ್ರೀಮತಿ ಸುರೇಖಾ ಆಯ್ಕೆ

ಇಂದಬೆಟ್ಟು: ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ (ನಿ.) ಇಂದಬೆಟ್ಟು ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ರೇಣುಕಾ ವಸಂತ ಗೌಡ ಕಲ್ಲಾಜೆ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಸುರೇಖಾ ನವೀನ್ ಜೈನ್ ಪಾದೆ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು(ಡಿ.3) ಸಂಘದ ಕಛೇರಿಯಲ್ಲಿ ರಿಟರ್ನಿಂಗ್ ಅಧಿಕಾರಿ ಪ್ರತಿಮಾ ಬಿ.ವಿ ಇವರು ನೂತನ ಅಧ್ಯಕ್ಷರ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಬಿಜೆಪಿ ಬೆಂಬಲಿತ ಶ್ರೀಮತಿ ಕುಸುಮಾವತಿ ಶಶಿಧರ ಗೌಡ, ಶ್ರೀಮತಿ ಹೇಮಾವತಿ ವೆಂಕಪ್ಪ ಮೂಲ್ಯ, ಶ್ರೀಮತಿ ಲೀಲಾ ಸನತ್ ಆಚಾರ್ಯ, ಶ್ರೀಮತಿ ಸುಮಿತ್ರಾ ಕೆ, ಶ್ರೀಮತಿ ಸೌಮ್ಯಾ ಸುರೇಂದ್ರ ಕುಕ್ಕಿಮಾರು, ಶ್ರೀಮತಿ ಸುಮತಿ ಶೇಖರಗೌಡ ಕುದುರು, ಶ್ರೀಮತಿ ಅಕ್ಕಮ್ಮ ಶ್ರೀಧರ ಮುಗೇರ ನೇತ್ರಾವತಿ ನಗರ, ಶ್ರೀಮತಿ ಪ್ರೇಮಾ ವಿದ್ಯಾನಂದ ಗುಡಿಗಾರ್, ಶ್ರೀಮತಿ ವಿನುತಾ ಡಿ. ಸುದೀಶ್ ಕುಮಾರ್, ಕಾಂಗ್ರೆಸ್ ಬೆಂಬಲಿತರಾದ ಶ್ರೀಮತಿ ಆಶಾ ಗಣೇಶ್, ಶ್ರೀಮತಿ ಎಲ್ಸಿ ಉಪಸ್ಥಿತರಿದ್ದರು.

Related posts

ಜೂ.27: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದಿಂದ ಕೆಂಪೇಗೌಡ ಜಯಂತಿ ಆಚರಣೆ ಹಾಗೂ ಬೃಹತ್‌ ರಕ್ತದಾನ ಶಿಬಿರ

Suddi Udaya

ವೇಣೂರು ನಡ್ತಿಕಲ್ಲು ನಿವಾಸಿ ಇಸ್ಮಾಯಿಲ್ ಮುಸ್ಲಿಯಾರ್ ನಿಧನ

Suddi Udaya

ಕೂಕ್ರಬೆಟ್ಟು ಸರ್ಕಾರಿ ಶಾಲೆಗೆ ರೂ.1.10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ: ಫೆ.17: ಕಟ್ಟಡ ಲೋಕಾರ್ಪಣಾ ಸಮಾರಂಭ

Suddi Udaya

ಬೊಂಟ್ರೋಟ್ಟುಗುತ್ತು: ಪ್ರತಾಪಸಿಂಹ ನಾಯಕ್ ರವರಿಂದ ಹೈಮಾಸ್ಕ್ ದೀಪದ ಉದ್ಘಾಟನೆ

Suddi Udaya

ಶಿಬಾಜೆ ಗ್ರಾ.ಪಂ. ನಲ್ಲಿ ರೋಜ್ ಗಾರ್ ದಿನಾಚರಣೆ

Suddi Udaya

ಬೆಳ್ತಂಗಡಿ:ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ ಸಾವು

Suddi Udaya
error: Content is protected !!