April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಸಂತ ಅಂತೋನಿ ಚರ್ಚ್ ಇದರ ಮುಂದಾಳತ್ವದಲ್ಲಿ ಹೊಸ ಮನೆಯ ಆಶೀರ್ವಚನ ಮತ್ತು ಹಸ್ತಾಂತರ ಕಾರ್ಯಕ್ರಮ

ಬೆಳ್ತಂಗಡಿ: ಉಜಿರೆ ಸಂತ ಅಂತೋನಿ ಚರ್ಚ್ ಇದರ ಮುಂದಾಳತ್ವದಲ್ಲಿ ಪಾಲಾನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್ ಇವರ ನೇತೃತ್ವದಲ್ಲಿ ಚರ್ಚ್‌ನ ಎಲ್ಲಾ ಸಂಘಟನೆಗಳು ಹಾಗೂ ಮೈಕಲ್ ಡಿಸೋಜ ಪುತ್ತೂರು, ಸಿಒಡಿಪಿ ಹ್ಯುಮಾನಿಟಿ ಬೆಳ್ಮಣ್ ಹಾಗೂ ಊರ ಪರವೂರ ದಾನಿಗಳ ನೆರವಿನೊಂದಿಗೆ ಅಶಕ್ತ ಕುಟುಂಬಕ್ಕೆ ನಿರ್ಮಾಣಗೊಂಡ ಹೊಸ ಮನೆಯ ಆಶೀರ್ವಚನ ಮತ್ತು ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಇದು 5 ನೇ ಯೋಜನೆಯಾಗಿದ್ದು ಇದುವರೆಗೆ ಸುಮಾರು 37 ಲಕ್ಷ ವೆಚ್ಚದಲ್ಲಿ 2021 ರಿಂದ ಇಂದಿನವರೆಗೆ ಮೂರು ಮನೆಗಳ ನವೀಕರಣ ಹಾಗೂ 2 ಹೊಸ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ.
ಹಸ್ತಾಂತರ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಹ್ಯುಮಾನಿಟಿ ಟ್ರಸ್ಟ್ ಬೆಳ್ಮಣ್ ಇದರ ಸ್ಥಾಪಕ ರೋಶನ್ ಡಿಸೋಜ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷ ಉಷಾ ಕಿರಣ್ ಕಾರಂತ್ ಹಾಜರಿದ್ದು ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಂತೋನಿ ಚರ್ಚಿನ ಧರ್ಮ್ ಗುರು ವಂದನೀಯ ಅಬೆಲ್ ಲೋಬೋ ವಹಿಸಿದ್ದರು.
ಅನುಗ್ರಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ವಂದನೀಯ ವಿಜಯ್ ಲೋಬೋ, ದಯಾ ವಿಶೇಷ ಶಾಲೆಯ ಧರ್ಮಗುರು ವಂದನೀಯ ವಿನೋದ್ ಮಸ್ಕರೆನಸ್, ಕಾಪುಚಿನ್ ಅಶ್ರಮ ದಯಾಳ್ ಭಾಗ್ ಧರ್ಮಗುರು ವಂದನೀಯ ಎಡ್ಡಿನ್ ಲೋಬೋ, ಎಸ್.ಎಮ್.ಐ ಕಾನ್ವೆಂಟ್ ಸುಪೀರಿಯರ್ ಧರ್ಮ ಭಗಿನಿ ನ್ಯಾನ್ಸಿ ಡಯಾಸ್, ಫಲಾನುಭವಿ ರೋಜಿ ಪಾಯ್ಸ್ ಕುಟುಂಬಸ್ಥರು ಹಾಜರಿದ್ದರು.

ಪಾಲಾನಾ ಮಂಡಳಿ ಕಾರ್ಯದರ್ಶಿ ಲಿಗೋರಿ ವಾಸ್ ಸ್ವಾಗತಿಸಿದರು. ಪಾಲಾನಾ ಮಂಡಳಿ ಸಂಯೋಜಕಿ ಲವೀನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿ ದನ್ಯಾವಾದವಿತ್ತರು. ಸಂತ ಲಾರೆನ್ಸ್ ವಾಳೆಯ ಗುರಿಕಾರರು ಮನೆ ಆಶೀರ್ವಚನದ ಪ್ರಾರ್ಥನೆ ಮಾಡಲು ಧರ್ಮ ಗುರುಗಳೊಂದಿಗೆ ಜತೆಗೂಡಿದರು.

Related posts

ಬೆಳ್ತಂಗಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳರವರಿಗೆ ಹಿಮಾಲಯ ವೃಕ್ಷಮಣಿದಾರರ ಪ್ರಶಸ್ತಿ ಪ್ರದಾನ

Suddi Udaya

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಇಳಂತಿಲ ಗ್ರಾ.ಪಂ.ನ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ : ಸದಸ್ಯರಿಂದ ಅಧ್ಯಕ್ಷರ ವಿರುದ್ಧ ಮತಚಲಾವಣೆ

Suddi Udaya

ಜೂ.15-29: ಶಿಶಿಲ ಗ್ರಾ.ಪಂ. ನಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

Suddi Udaya

ರಾಜ್ಯಮಟ್ಟದ ಹ್ಯಾಕಥಾನ್ ಸ್ಪರ್ಧೆ: ಶ್ರೀ ಧ.ಮಂ. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ

Suddi Udaya

ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಅವರ ಡ್ರಾಗನ್ ಕೃಷಿ ತೋಟಕ್ಕೆ ವಿಜ್ಞಾನಿ ತಂಡ ಭೇಟಿ

Suddi Udaya
error: Content is protected !!