24 C
ಪುತ್ತೂರು, ಬೆಳ್ತಂಗಡಿ
July 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಉಜಿರೆ: ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದ ವ್ಯಕ್ತಿ ನಾಪತ್ತೆ

ಉಜಿರೆ: ಸುಬ್ರಮಣ್ಯಕ್ಕೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಜಿರೆ ಮುಂಡತ್ತೋಡಿ ನಿವಾಸಿ ಹರೀಶ್ ರವರ ಪತ್ನಿ ನಯನರವರ ದೂರಿನಂತೆ ಹರೀಶ್ ( 35 ವರ್ಷ) ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ಕುಡಿತದ ಚಟವುಳ್ಳವರಾಗಿರುತ್ತಾರೆ. ನ.20 ರಂದು ಬೆಳಿಗ್ಗೆ 6 ಗಂಟೆಗೆ ಸುಬ್ರಮಣ್ಯಕ್ಕೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ಈವರೆಗೆ ಮನೆಗೆ ಬಾರದೇ ಇದ್ದು ಅವರ ದೂರವಾಣಿಗೆ ಕರೆ ಮಾಡಲಾಗಿ ಸ್ವಿಚ್ ಆಫ್ ಇದ್ದು ಅವರ ತಂದೆ-ತಾಯಿ ಮನೆಯಾದ ಈಶ್ವರಮಂಗಳಕ್ಕೆ ಪೋನ್ ಮಾಡಿ ವಿಚಾರಿಸಲಾಗಿ ಅಲ್ಲಿಗೂ ಸಹ ಹೋಗದೇ ಕಾಣೆಯಾಗಿರುತ್ತಾರೆ, ಹಾಗೂ ಈ ಹಿಂದೆಯೂ ಸಹ ಮನೆಯಿಂದ ಹೋದವರು 1 ವಾರದ ನಂತರ ಮನೆಗೆ ಬರುತ್ತಿದ್ದರು ಆದ್ದರಿಂದ ಮರಳಿ ಬರುಬಹುದೆಂಬ ನಿರೀಕ್ಷೆಯಿಂದ ಇದ್ದು ಮರಳಿ ಬಾರದೇ ಇರುವುದರಿಂದ ಡಿ.4 ರಂದು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ,

ಈ ಬಗ್ಗೆ, ಎಲ್ಲಿಯಾದರೂ ಕಂಡು ಬಂದರೆ ಕೂಡಲೇ ಬೆಳ್ತಂಗಡಿ ಪೊಲೀಸ್ ಠಾಣೆ (08256- 232093) ಅಥವಾ ದ.ಕ ಜಿಲ್ಲಾ, ಕಂಟ್ರೋಲ್ ರೂಂ(0824-2220500) ಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ.

Related posts

ರೈತರ ಕೃಷಿ ಪಂಪು ಸೆಟ್ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಶಾಸಕ ಹರೀಶ್ ಪೂಂಜರಿಗೆ ಮನವಿ

Suddi Udaya

ಉಜಿರೆ ಚಿದಾನಂದ ಗೌಡ ನಿಧನ

Suddi Udaya

ಮೇದೋಜಿರಕ ಗ್ರಂಥಿ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಉಪನ್ಯಾಸಕ ನಂದಕುಮಾರ್ ಚಿಕಿತ್ಸೆಗೆ ಸ್ಪಂದಿಸದೆ ನಿಧನ

Suddi Udaya

ಗೇರುಕಟ್ಟೆ: ವರ್ಗಾವಣೆ ಹೊಂದಿದ ಶಿಕ್ಷಕಿ ಮಮತಾರಿಗೆ ಸನ್ಮಾನ

Suddi Udaya

ವಾಣಿ ಪದವಿಪೂರ್ವ ಕಾಲೇಜಿನಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ವೀಲ್ ಚಯರ್ ನಲ್ಲಿ ಬಂದು 88 ವರ್ಷದ ಅಜ್ಜಿ ಗಂಗಮ್ಮ ಹೆಗ್ಡೆಯವರಿಂದ ಮತದಾನ

Suddi Udaya
error: Content is protected !!