September 6, 2026
ಅಭಿನಂದನೆಗ್ರಾಮಾಂತರ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಗೇರುಕಟ್ಟೆ: ವರ್ಗಾವಣೆ ಹೊಂದಿದ ಶಿಕ್ಷಕಿ ಮಮತಾರಿಗೆ ಸನ್ಮಾನ

ಬೆಳ್ತಂಗಡಿ: ಗೇರುಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಇಲ್ಲಿ ಕಳೆದ 13 ವರ್ಷಗಳಿಂದ ಸಮಾಜ ವಿಜ್ಞಾನ ವಿಷಯದ ಶಿಕ್ಷಕರಾಗಿ ಸಾರ್ಥಕ ಸೇವೆ ಸಲ್ಲಿಸಿ ಇತ್ತೀಚೆಗೆ ಸರ್ಕಾರಿ ಪ್ರೌಢಶಾಲೆ, ಸವಣಾಲು ಇಲ್ಲಿಗೆ ವರ್ಗಾವಣೆಗೊಂಡ ಮಮತಾ ಅವರಿಗೆ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭವು ಜರುಗಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಪ್ರಾಂಶುಪಾಲೆ ಈಶ್ವರಿ ಕೆ. ಮಾತನಾಡಿ “ಒಂದೇ ಸಂಸ್ಥೆಯಲ್ಲಿ 13 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ಶ್ರೇಯೋಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಮಮತಾ ಅವರಿಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡ ಮಮತಾ ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಅತ್ಯಂತ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಮತಾ ಅವರು “ಈ ಸಂಸ್ಥೆಯಲ್ಲಿ ಕಳೆದ 13 ವರ್ಷಗಳು ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳು ಸಹೋದ್ಯೋಗಿಗಳ ಸಹಕಾರ ಮತ್ತು ಇಲ್ಲಿನ ಪರಿಸರ ನನ್ನ ವೃತ್ತಿ ಜೀವನಕ್ಕೆ ಹೆಚ್ಚಿನ ಶಕ್ತಿ ನೀಡಿದೆ” ಎಂದು ನುಡಿದರು.

ಕಾರ್ಯಕ್ರಮದಲ್ಲಿ ಎಸ್‌.ಡಿ.ಎಂ.ಸಿ ಕಾರ್ಯಧ್ಯಕ್ಷ ಗೋಪಾಲ ಗೌಡ ಹಾಗೂ ಇತರ ಸದಸ್ಯರು, ಶಿಕ್ಷಕ ವೃಂದದವರು, ಶಾಲಾ ಸಿಬ್ಬಂದಿ ಉಪಸ್ಥಿತರಿದ್ದು ಮಮತಾ ಅವರಿಗೆ ಶುಭ ಹಾರೈಸಿದರು. ಜ್ಯೋತಿ ಕಾರ್ಯಕ್ರಮವನ್ನು ನಿರೂಪಿಸಿ ರಮ್ಯಾ ಅಭಿನಂದಿಸಿದರು.

Related posts

ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಯೋಗ ತರಬೇತಿ ಶಿಬಿರ ಉದ್ಘಾಟನೆ

Suddi Udaya

ಉಜಿರೆ: ಕುಂಟಿನಿ ಮದ್ರಸದಲ್ಲಿ ಸ್ಥಾಪಕ ದಿನಾಚರಣೆ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಾಧನ ಪ್ರಶಸ್ತಿ

Suddi Udaya

ಕಡಿರುದ್ಯಾವರ: ಕಾನರ್ಪ ಪುರುಷರ ಬಳಗದ ವತಿಯಿಂದ ಪುರುಷರ ರಾಶಿ ಪೂಜೆ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಶ್ರಮದಾನ ಆರಂಭ

Suddi Udaya

ನಾರಾವಿ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಚಂದ್ರಾವತಿ ಆಚಾರ್ಯ ನಿಧನ

Suddi Udaya
error: Content is protected !!