ಬೆಳ್ತಂಗಡಿ: ನಿಮ್ಮ ನಿಮ್ಮ ಗ್ರಾಮಗಳಿಗೆ ಇಲಾಖೆಗಳ ಪಯಣ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ನೇತೃತ್ವದಲ್ಲಿ ಮಾದರಿ ಕಾರ್ಯಕ್ರಮ.
ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ತಾಲೂಕಿನ ಎಲ್ಲಾ ಇಲಾಖಾಧಿಕಾರಿಗಳ ಉಪಸ್ಥಿತಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ. ಇದರ ಪ್ರಥಮ ಹಂತವಾಗಿ ಡಿಸೆಂಬರ್ 07 ರ ಶನಿವಾರದಂದು ನಾರಾವಿ ಮತ್ತು ವೇಣೂರು ಪಂಚಾಯತ್ ನಲ್ಲಿ ನಡೆಯಲಿದೆ.
ಆಯಾ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ತಿಳಿಸಿದ್ದಾರೆ. ಡಿ.07 ಸಮಯ : ಪೂರ್ವಾಹ್ನ 10.30 ರಿಂದ ನಾರಾವಿ ಗ್ರಾಮ ಪಂಚಾಯತ್.ಅಪರಾಹ್ನ :2.30 ರಿಂದ ವೇಣೂರು ಗ್ರಾಮ ಪಂಚಾಯತ್.ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಜನಸ್ಪಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿಸಲಾಗಿದೆ.