ಬೆಳ್ತಂಗಡಿ: ಕಳೆದ 7 ವರ್ಷಗಳಿಂದ ಚಿನ್ನ ಆಭರಣಗಳಲ್ಲಿ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುತ್ತಾ ಬರುತ್ತಿರುವ ಪೃಥ್ವಿ ಜುವೆಲ್ಸ್ ನಲ್ಲಿ ವಿವಿಧ ಹಬ್ಬಗಳ ಪ್ರಯುಕ್ತ ಏರ್ಪಡಿಸಿದ ಬಂಪರ್ ಲಕ್ಕಿ ಡ್ರಾ ಅದೃಷ್ಟಶಾಲಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ವೇಳೆ ಅದೃಷ್ಟಶಾಲಿಗಳಾಗಿ ಪ್ರಥಮ ಸ್ಥಾನ ಪಡೆದ ಹರ್ಷಿತ್ ಇಂದ್ರ ರವರಿಗೆ ಫ್ರಿಜ್ಜ್, ದ್ವಿತೀಯ ಸ್ಥಾನ ಪಡೆದ ಮುಸ್ಕಾನ್ ರವರಿಗೆ ಎಲ್ ಇಡಿ ಟಿವಿ, ತೃತೀಯ ಸ್ಥಾನ ಪಡೆದ ಸಂತೋಷ್ ಆಚಾರ್ಯ ರವರಿಗೆ ವಾಶಿಂಗ್ ಮಿಷನ್, ಚತುರ್ಥ ಸ್ಥಾನ ಪಡೆದ ನಿರ್ಮಲಾರವರಿಗೆ ಗ್ರೈಂಡರ್, ಹಾಗು 5 ನೇ ಸ್ಥಾನ ಪಡೆದ ಅನಿತಾ ರವರಿಗೆ ಇಂಡಕ್ಷನ್ ಕುಕ್ಟಾಪ್ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಅಶೋಕ್, ಪೃಥ್ವಿ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.