December 5, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಹೊಸಂಗಡಿ: ಪೆರಿಂಜೆ ನಿವಾಸಿ ಸುಂದರ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ. 4 ರಂದು ನಡೆದಿದೆ.

ಹೊಸಂಗಡಿ ಗ್ರಾಮದ ಪಡ್ಯಾರಬೆಟ್ಟು ಸಮೀಪದ ಪೆರಿಂಜೆ ನಿವಾಸಿ ಸುಂದರ (41ವ) ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು.

ಇವರು ಕಳೆದ ಕೆಲವು ಸಮಯದಿಂದ ಮಾನಸಿಕ ಖಿನ್ನತೆಗೆ ಸಂಬಂಧಿಸಿ ಚಿಕಿತ್ಸೆ ಪಡೆಯುತ್ತಿದ್ದು ಇತ್ತೀಚಿಗೆ ಕೆಲವು ದಿನಗಳಿಂದ ಕಸಬಾ ಗ್ರಾಮದ ರೆಂಕೆದಗುತ್ತುವಿನಲ್ಲಿರುವ ತನ್ನ ಸಹೋದರಿ ಶೋಭಾ ಎಂಬವರ ಮನೆಯಲ್ಲಿದ್ದು ಚಿಕಿತ್ಸೆಗಾಗಿ ಬಂಟ್ವಾಳಕ್ಕೆ ಹೋಗಿ ಬರುತ್ತಿದ್ದರು. ಸಹೋದರಿಯ ಮನೆಯಲ್ಲಿ ಮಂಗಳವಾರ ರಾತ್ರಿ ಊಟ ಮಾಡಿ, ಸುಮಾರು 11 ಗಂಟೆ ಹೊತ್ತಿಗೆ ಮಲಗಿದ್ದ ಸುಂದರ ತಮ್ಮ ಚಿಕಿತ್ಸೆ ಗುಣಮುಖರಾಗದೆ ಮನನೊಂದು ಡಿ.4 ರಂದು ಮನೆಯ ಹಿಂಭಾಗದಲ್ಲಿ ಬಾತ್ ರೂಮ್ ನ ಪಕ್ಕಾಸ್ ಒಂದಕ್ಕೆ ತನ್ನ ಲುಂಗಿಯಿಂದಲೇ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಬೆಳಾಲು ಯಕ್ಷ ಮಾಣಿಕ್ಯ ಕಲಾ ಸಂಘ ಉದ್ಘಾಟನೆ

Suddi Udaya

ಅಂಡಿOಜೆ … ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ

Suddi Udaya

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ರಿಂದ ಜನತಾ ದರ್ಶನ ಕಾರ್ಯಕ್ರಮ: ಸರ್ಕಾರದ ವಿವಿಧ ಸೌಲಭ್ಯಗಳ ವಿತರಣೆ: ಸಾವ೯ಜನಿಕರಿಂದ‌ ಅಹವಾಲು ಸ್ವೀಕಾರ

Suddi Udaya

ಬೆಳ್ತಂಗಡಿ ಜೆಸಿಐ ಮಂಜುಶ್ರೀ ಮಹಿಳಾ ವಿಭಾಗದಿಂದ ಮೆಡಿಕಲ್ ಕ್ಯಾಂಪ್

Suddi Udaya

ಬೆಳ್ತಂಗಡಿ: ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ಸೋಮನಾಥ ಭಟ್ ಪಟವರ್ಧನ್ ನಿಧನ

Suddi Udaya

ಉಜಿರೆ: ಭಜರಂಗದಳ ಕಾರ್ಯಕರ್ತರಿಂದ ಮಿಂಚಿನ ಕಾರ್ಯಾಚರಣೆ: ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ಕು ಗೋವುಗಳ ರಕ್ಷಣೆ

Suddi Udaya
error: Content is protected !!