27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಾಯಿಲ: ದಯಾ ವಿಶೇಷ ಶಾಲೆಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ

ಲಾಯಿಲ: ದಯಾ ವಿಶೇಷ ಶಾಲೆ, ವಿಮುಕ್ತಿ, ಲಾಯಿಲ ಇಲ್ಲಿ ಡಿ.04 ರಂದು ವಿಶ್ವ ಅಂಗವಿಕಲರ ದಿನಾಚರಣೆಯನ್ನು
ಆಚರಿಸಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ವಂ.ಫಾ.ವಿನೋದ್‌ ಮಸ್ಕರೇನಸ್‌, ಯದುಪತಿ ಗೌಡ, ಪ್ರಾಂಶುಪಾಲರು ವಾಣಿ ಆಂಗ್ಲ ಮಾಧ್ಯಮ ಶಾಲೆ, ಶ್ರೀಮತಿ ಪ್ರಿಯಾ ಆಗ್ನೆಸ್‌, ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ, ಬೆಳ್ತಂಗಡಿ, ವಂ.ಫಾ.ರೋಹನ್‌ ಲೋಬೋ, ಸಹ-ನಿರ್ದೇಶಕರು ಸಿ.ಕೆ.ಎಸ್.ಕೆ, ಶಾಲಾ ಮುಖ್ಯ ಶಿಕ್ಷಕಿ ದಿವ್ಯ ರವರು, ಹೈದರ್‌
ಪ್ರಾಂಶುಪಾಲರು, ಮನ್‌ಶರ್ ಪ್ಯಾರಾ ಮೆಡಿಕಲ್‌ ಕಾಲೇಜ್‌, ಗೇರುಕಟ್ಟೆ, ಶಾಲಾ ಪೋಷಕ ಪ್ರತಿನಿಧಿಯಾಗಿ
ಶುಭಕರ್‌. ಶಾಲಾ ವಿಧ್ಯಾರ್ಥಿ ಪ್ರತಿನಿಧಿಯಾಗಿ ಮಾಸ್ಟರ್‌ ಸಾಬಿತ್‌ ಉಪಸ್ಥಿತರಿದ್ದರು.


ವಂ.ಫಾ.ವಿನೋದ್‌ ಮಸ್ಕರೇನಸ್‌ ರವರು ಮಾತನಾಡಿ, ಪ್ರತಿ ಸರಕಾರಿ ಕಛೇರಿಗಳಲ್ಲಿ ಹಾಗೂ ಇನ್ನಿತರ ಸಾಮಾಜಿಕ
ವ್ಯವಸ್ಥೆಗಳಲ್ಲಿ ವಿಶೇಷ ಚೇತನ ಮಕ್ಕಳಿಗೆ ವಿವಿಧ ಉದ್ಯೋಗ ಅವಕಾಶಗಳು ಒದಗಿಸಿಕೊಡುವ ಅಗತ್ಯವಿದೆ ಹಾಗೂ ನಮ್ಮ
ಸಮಾಜದಲ್ಲಿ ವಿಶೇಷ ಚೇತನ ಮಕ್ಕಳಿಗೆ ಸಂಬಂದಿಸಿದಂತೆ ಮಗು ಸ್ನೇಹಿ ವಾತಾವರಣವನ್ನು ಬೆಳೆಸಬೇಕು ಇದರಿಂದ ಈ
ಮಕ್ಕಳಿಗೂ ಸಮಾನ ಅವಕಾಶವನ್ನು ನಾವು ನೀಡಿದಂತಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಯದುಪತಿ ಗೌಡ, ಪ್ರಾಂಶುಪಾಲರು, ವಾಣಿ ಆಂಗ್ಲ ಮಾಧ್ಯಮ ಶಾಲೆ ಇವರು ಮಾತನಾಡಿ, ವಿಶೇಷ ಚೇತನ ಮಕ್ಕಳಿಗೂ ಈ ಸಮಾಜದಲ್ಲಿ ಸಮಾನ ಸ್ಥಾನಮಾನಗಳನ್ನು ಪಡೆದು ಬದುಕುವ ಹಕ್ಕಿದೆ. ಶಾಲೆಯಲ್ಲಿ ಪ್ರತಿಯೊಬ್ಬ ಮಗುವೂ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇಂತಹ ದಿವ್ಯಾಂಗ ಮಕ್ಕಳ ಸೇವೆಯನ್ನು ಮಾಡುತ್ತಿರುವ ಈ ಸಂಸ್ಥೆಯು ನಮ್ಮ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಮಗೆ ಹೆಮ್ಮೆಯ ವಿಚಾರ ಎಂದು ಅಭಿನಂದಿಸಿದರು.


ಶ್ರೀಮತಿ ಪ್ರಿಯಾ ಆಗ್ನೆಸ್‌, ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ, ಬೆಳ್ತಂಗಡಿ, ಇವರು ಸಂಸ್ಥೆಗೆ
ಶುಭ ಕೋರುತ್ತಾ, ಸಮಾಜದಲ್ಲಿರುವ ನಾವೆಲ್ಲರೂ ಒಂದಾಗಿ ಈ ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ
ತರುವ ಕೆಲಸ ಮಾಡಬೇಕಾಗಿದೆ. ಈ ಮಕ್ಕಳಿಗೆ ಇಂದು ಸಾಧನೆ ಮಾಡಲು ಅವಕಾಶಗಳು ಬಹಳಷ್ಟು ಇವೆ. ಪೋಷಕರು ತಮ್ಮ
ಮಕ್ಕಳನ್ನು ತಮ್ಮ ಜೊತೆಯಲ್ಲಿರಿಸಿಕೊಂಡು, ಅವರ ಆರೈಕೆ ಮಾಡಿ, ಅವರಿಗೆ ತಮ್ಮ ಜೀವನ ನಿರ್ವಹಣೆಗೆ ಬೇಕಾದ ಅಗತ್ಯ
ಕೌಶಲ್ಯಗಳನ್ನೂ ಕಲಿಸಿಕೊಡಬೇಕಾಗುತ್ತದೆ. ನಮ್ಮೆಲ್ಲ ಪೋಷಕರಿಗೆ ಈ ಸಂಸ್ಥೆಯು ಒಂದು ವರದಾನವಾಗಿದೆ ಎಂದರು.

ಈ ಸಂದರ್ಭದಲ್ಲಿ ಹೈದರ್‌ ಪ್ರಾಂಶುಪಾಲರು, ಮನ್‌ಶರ್ ಪ್ಯಾರಾ ಮೆಡಿಕಲ್‌ ಕಾಲೇಜ್‌, ಗೇರುಕಟ್ಟೆ ಹಾಗೂ ಅಲ್ಲಿನ
ಶಿಕ್ಷಣಾಧಿಕಾರಿಗಳು ಮತ್ತು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಶಾಲಾ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ನೆರವೇರಿಸಿಕೊಟ್ಟರು. ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪೆಷಲ್‌ ಒಲಿಂಪಿಕ್‌ ಕ್ರೀಡಾ ಕೂಟ ಹಾಗೂ ಶಾಲಾ ಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಲಾ ಶಿಕ್ಷಕಿ ಕುಮಾರಿ ನಳಿನಾಕ್ಷಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಕುಮಾರಿ ಸ್ವಾತಿ ವಂದಿಸಿದರು.

Related posts

ಬಳಂಜ: ಎಲ್ಯೊಟ್ಟು ನಿವಾಸಿ ಸೋಮನಾಥ ಪೂಜಾರಿ ನಿಧನ

Suddi Udaya

ದ.ಕ ಲೋಕಸಭಾ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ ಕ್ಯಾ| ಬ್ರಿಜೇಶ್ ಚೌಟ: 149208 ಮತಗಳ ಅಂತರದಿಂದ ಭರ್ಜರಿ ಗೆಲುವು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆ ಸೋಲು

Suddi Udaya

ಉಜಿರೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಉಜಿರೆ ಮಲ ತ್ಯಾಜ್ಯ ಘಟಕದ ಬಗ್ಗೆ ಕೇಂದ್ರ ಸಚಿವರ ಸಂವಾದ

Suddi Udaya

ಎಸ್ ಡಿ ಎಮ್ ‌ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಸೈಬರ್ ಭದ್ರತೆ ಕುರಿತು ಉಪನ್ಯಾಸ

Suddi Udaya

ಪ್ರದೀಶ್ ಮಾರೋಡಿ ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರತಿಷ್ಠಿತ ಮೈಸೂರು ದಿಗಂತ ಪ್ರಶಸ್ತಿ ಪ್ರಧಾನ

Suddi Udaya
error: Content is protected !!