September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿವರದಿ

ಎಸ್ ಡಿ ಎಮ್ ‌ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಸೈಬರ್ ಭದ್ರತೆ ಕುರಿತು ಉಪನ್ಯಾಸ

ಉಜಿರೆ : ಎಸ್.ಡಿ.ಎಂ ಪಾಲಿಟೆಕ್ನಿಕ್‌ನ ಕಂಪ್ಯೂಟರ್ ಸೈನ್ಸ್ ವಿಭಾಗವು 2025ರ ಅ. 11 ರಂದು “ಸೈಬರ್ ಭದ್ರತೆ” ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಉಜಿರೆ) ಎಲೆಕ್ಟ್ರಾನಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮೋಹನ್ ನಾಯ್ಕ್ ಆರ್ ಅವರು ಮಾತನಾಡಿದರು.

ಅವರು ಇಂದಿನ ಡಿಜಿಟಲ್ ಜಗತ್ತಿನಲ್ಲಿ ಸೈಬರ್ ಭದ್ರತೆ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದರು. ಬೇರೆ ಬೇರೆ ರೀತಿಯ ಸೈಬರ್ ಅಪಾಯಗಳು (Cyber Threats). ಮಾಹಿತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಉತ್ತಮ ಮಾರ್ಗಗಳು (Data Protection Strategies). ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿ ಇರಲು ನಾವು ಅನುಸರಿಸಬೇಕಾದ ಉತ್ತಮ ನಡೆಗಳು (Ethical Practices).
ವಿದ್ಯಾರ್ಥಿಗಳು ಸೈಬರ್ ಅಪಾಯಗಳಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಾದ ಸಂತೋಷ್, ವ್ಯವಸ್ಥಾಪಕರಾದ ಚಂದ್ರನಾಥ್ ಜೈನ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ದಿನೇಶ್ ಉಪಸ್ಥಿತರಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ಶ್ರೀಮತಿ ರೇನೀಟಾ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ರುಡ್‌ಸೆಟ್‌ನ 1000ನೇ ಫೋಟೋಗ್ರಫಿ–ವಿಡಿಯೋಗ್ರಫಿ ಹಾಗೂ 998ನೇ ಕಂಪ್ಯೂಟರ್ ಅಕೌಂಟಿಂಗ್ ತರಬೇತಿ ತಂಡಗಳ ಸಮಾರೋಪ

Suddi Udaya

ತಣ್ಣೀರುಪಂತ ಸುಗಮ ಸಂಜೀವಿನಿ ಹಾಗೂ ಬಾರ್ಯ ಕನಸು ಸಂಜೀವಿನಿ ಮಹಿಳಾ ಒಕ್ಕೂಟದಿಂದ ಸಮಗ್ರ ಕೃಷಿ ಚಟುವಟಿಕೆಯ ಮಾಹಿತಿ ಕಾರ್ಯಾಗಾರ

Suddi Udaya

ಡಿ 13-14: ಬಳಂಜ ಶಾಲೆಗೆ ಅಮೃತ ಮಹೋತ್ಸವ ಸಂಭ್ರಮ, ಗುರುವಂದನೆ, 5 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ : ಪತ್ರಿಕಾಗೋಷ್ಠಿಯಲ್ಲಿ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ ಮಾಹಿತಿ

Suddi Udaya

ಕೊಕ್ಕಡ: ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ ಘಟಕದ ಪದಗ್ರಹಣ ಹಾಗೂ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ

Suddi Udaya

ಗುರುವಾಯನಕೆರೆ: ಶ್ರೀ ವೇದವ್ಯಾಸ ಶಿಶುಮಂದಿರದ ಪುಟಾಣಿ ಮಕ್ಕಳಿಗೆ ಶಿಶು ಶಿಕ್ಷಣ ಪ್ರಮಾಣ ಪತ್ರ

Suddi Udaya

ಶ್ರೀನಾಗ ಬ್ರಹ್ಮ ಸೇವಾ ಸನ್ನಿಧಿ ಕೊಜಪ್ಪಾಡಿ

Suddi Udaya
error: Content is protected !!