25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಕಂಪ್ಯೂಟರ್‌ ಅಕೌಂಟಿಂಗ್‌ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ : ನೀವು ಕಲಿತ ವಿದ್ಯೆಯನ್ನು ನಿಮ್ಮ ಗ್ರಾಹಕರಿಗೆ ತಲುಪಿಸಲು ನಿಮ್ಮ ಸೇವೆಯ ಜೊತೆಗೆ ನಿಮ್ಮ ಮುಖದಲ್ಲಿ ನಗು ಇರಬೇಕು. ಡಾ. ಡಿ.ವೀರೇಂದ್ರ ಹೆಗಡೆಯವರ ಸಮಾಜಮುಖಿ ಆನೇಕ ಕಾರ್ಯಕ್ರಮ ಇದೆ ಇದು ಎಲ್ಲವೂ ಮಾದರಿ ಸಂಸ್ಥೆಯಾಗಿದೆ. ಇದೇ ರೀತಿಯಲ್ಲಿ ರುಡ್‌ ಸೆಟ್‌ ಸಂಸ್ಥೆ ಆನೇಕ ಯುವಕ-ಯುವತಿಯವರಿಗೆ ಮತ್ತು ಅವರ ಕುಂಟುಂಬಗಳಿಗೆ ಸ್ವಂತ ಕಾಲಿನಲ್ಲಿ ನಿಂತು ಬದುಕು ನಡೆಸಲು ಸಾಧ್ಯವಾಗಿದೆ. ನಿಮ್ಮಲ್ಲಿ ಬಂದ ಗ್ರಾಹಕರನ್ನುಯಾವ ರೀತಿಯಲ್ಲಿ ಮೊದಲು ಅಧರಿಸಬೇಕು ಅದರ ಮೂಲಕ ನಿಮ್ಮ ವ್ಯವಹಾರದ ಅಭಿವೃದ್ಧಿ ಇರುತ್ತದೆ. ವ್ಯವಹಾರ ಅಭಿವೃದ್ಧಿ ಯಾಗ ಬೇಕಾದರೆ ಗ್ರಾಹಕರ ಜೊತೆ ಉತ್ತಮ ಬಾಂದವ್ಯ ಇರಿಸಿಕೊಳ್ಳಬೇಕು. ನಿಮ್ಮ ವ್ಯವಹಾರದಲ್ಲಿ ಶಿಸ್ತು, ನಡೆ, ನುಡಿ ಇರಲಿ . ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯ ಇಲ್ಲಿನ ಪ್ರಾಶುಂಪಾಲರಾದ ಡಾ. ಅಶೋಕ್‌ ಕುಮಾರ್ ಅಭಿಪ್ರಾಯ ಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ “ ಕಂಪ್ಯೂಟರ್‌ ಅಕೌಂಟಿಂಗ್‌ (ಟ್ಯಾಲಿ)ʼʼ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ತಮ್ಮ ಅನುಭವದ ಹಂಚಿಕೊಂಡು ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಅವರು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು. ದೀಕ್ಷೀತ್‌ ಮತ್ತು ಜೀವನ ಪ್ರಾರ್ಥನೆ ಮಾಡಿದರು. ಶಿಬಿರಾರ್ಥಿಗಳಾದ ಕುಮಾರಿ ಶ್ರಾಮ್ಯ ರೈ ಮತ್ತು ಪ್ರಮೋದ ತನ್ನ ತರಬೇತಿಯ ಅನುಭವ ಹಂಚಿಕೊಂಡರು.

Related posts

ಡಾ. ಎನ್. ವಿನಯ ಹೆಗ್ಡೆ ನಿಧನಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಉಜಿರೆ ರಬ್ಬರ್ ಸೊಸೈಟಿ ವತಿಯಿಂದ ಆರ್ಥಿಕ ನೆರವು ಹಸ್ತಾಂತರ  

Suddi Udaya

ಸೋಣಂದೂರು-ಪಣಕಜೆಯ ಬಿಜೆಪಿ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆ

Suddi Udaya

ನಿಡ್ಲೆ ಸರ್ಕಾರಿ ಪ್ರೌಢಶಾಲಾ ಪ್ರಾರಂಭೋತ್ಸವ

Suddi Udaya

ಅಳದಂಗಡಿ ಪ.ಪೂ. ಕಾಲೇಜಿನಲ್ಲಿ ನೂತನ ವಿಜ್ಞಾನ ಪ್ರಯೋಗಾಲಯ ಕೊಠಡಿ ಮತ್ತು ಇತರ ಮೂಲಭೂತ ಸೌಕರ್ಯಗಳ ಉದ್ಘಾಟನೆ

Suddi Udaya

ಮುಡಾ ಹಗರಣ: ಹೈಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ

Suddi Udaya
error: Content is protected !!