ಗುರುವಾಯನಕೆರೆ: ಗುರುವಾಯನಕೆರೆಯ ಪಿಲಿಚಾಮುಂಡಿಕಲ್ಲಿನಲ್ಲಿ ವರ್ಷಂಪ್ರತಿ ನಡೆಯುವ ಕಾರಣಿಕ ದೈವ ಪಿಲಿಚಾಮುಂಡಿಯ ದೊಂಪದ ಬಲಿ ಉತ್ಸವವು ಊರ ಹಾಗೂ ಪರವೂರಿನ ಭಕ್ತರ ಉಪಸ್ಥಿಯಲ್ಲಿ ಡಿ.7ರಂದು ವೈಭವ ಪೂರ್ಣವಾಗಿ ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಸೋಮಶೇಖರ್ ದೇವಸ್ಯ ತಿಳಿಸಿದ್ದಾರೆ.
ಅಂದು ಸಂಜೆ ಗಂಟೆ 5ಕ್ಕೆ ಪಾಡ್ಯಾರುಬೀಡು ಮನೆಯಿಂದ ದೈವದ ಭಂಡಾರದ ಮೆರವಣಿಗೆಯು ಪಿಲಿಚಾಮುಂಡಿಕಲ್ಲಿನ ತನಕ ಅದ್ದೂರಿಯಾಗಿ ನಡೆಯಲಿದೆ. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ರಾತ್ರಿ ಪಿಲಿಚಾಮುಂಡಿ ದೈವದ ದೊಂಪದ ಬಲಿ ಉತ್ಸವ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ವಿನಂತಿಸಿದ್ದಾರೆ.