ಬೆಳ್ತಂಗಡಿ: ಬಂಟ್ವಾಳದಿಂದ ಬೆಳ್ತಂಗಡಿ ಕಡೆಗೆ ಪ್ರಯಾಣಿಸುತ್ತಿದ್ದ ಬೈಕ್ ಸವಾರ ಹಾಗೂ ಧರ್ಮಸ್ಥಳದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಬಸ್ ನಡುವೆ ರಾತ್ರಿ ವಗ್ಗ ಸಮೀಪ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಡಿ.5ರಂದು ನಡೆದಿದೆ.
ಮೃತಪಟ್ಟ ಬೈಕ್ ಸವಾರ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಡೆಕ್ಕಲೊಟ್ಟು ನಿವಾಸಿ ರಾಜೇಂದ್ರ ಪೂಜಾರಿ (45ವ) ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಶಾಲಿನಿ, ಪುತ್ರರಾದ ಶರತ್, ನಿಶಾಂತ್, ಹರ್ಷಿತ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.