ಉಜಿರೆ : ನೀವು ಕಲಿತ ವಿದ್ಯೆಯನ್ನು ನಿಮ್ಮ ಗ್ರಾಹಕರಿಗೆ ತಲುಪಿಸಲು ನಿಮ್ಮ ಸೇವೆಯ ಜೊತೆಗೆ ನಿಮ್ಮ ಮುಖದಲ್ಲಿ ನಗು ಇರಬೇಕು. ಡಾ. ಡಿ.ವೀರೇಂದ್ರ ಹೆಗಡೆಯವರ ಸಮಾಜಮುಖಿ ಆನೇಕ ಕಾರ್ಯಕ್ರಮ ಇದೆ ಇದು ಎಲ್ಲವೂ ಮಾದರಿ ಸಂಸ್ಥೆಯಾಗಿದೆ. ಇದೇ ರೀತಿಯಲ್ಲಿ ರುಡ್ ಸೆಟ್ ಸಂಸ್ಥೆ ಆನೇಕ ಯುವಕ-ಯುವತಿಯವರಿಗೆ ಮತ್ತು ಅವರ ಕುಂಟುಂಬಗಳಿಗೆ ಸ್ವಂತ ಕಾಲಿನಲ್ಲಿ ನಿಂತು ಬದುಕು ನಡೆಸಲು ಸಾಧ್ಯವಾಗಿದೆ. ನಿಮ್ಮಲ್ಲಿ ಬಂದ ಗ್ರಾಹಕರನ್ನುಯಾವ ರೀತಿಯಲ್ಲಿ ಮೊದಲು ಅಧರಿಸಬೇಕು ಅದರ ಮೂಲಕ ನಿಮ್ಮ ವ್ಯವಹಾರದ ಅಭಿವೃದ್ಧಿ ಇರುತ್ತದೆ. ವ್ಯವಹಾರ ಅಭಿವೃದ್ಧಿ ಯಾಗ ಬೇಕಾದರೆ ಗ್ರಾಹಕರ ಜೊತೆ ಉತ್ತಮ ಬಾಂದವ್ಯ ಇರಿಸಿಕೊಳ್ಳಬೇಕು. ನಿಮ್ಮ ವ್ಯವಹಾರದಲ್ಲಿ ಶಿಸ್ತು, ನಡೆ, ನುಡಿ ಇರಲಿ . ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯ ಇಲ್ಲಿನ ಪ್ರಾಶುಂಪಾಲರಾದ ಡಾ. ಅಶೋಕ್ ಕುಮಾರ್ ಅಭಿಪ್ರಾಯ ಪಟ್ಟರು.
ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ “ ಕಂಪ್ಯೂಟರ್ ಅಕೌಂಟಿಂಗ್ (ಟ್ಯಾಲಿ)ʼʼ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ತಮ್ಮ ಅನುಭವದ ಹಂಚಿಕೊಂಡು ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.
ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಅವರು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು. ದೀಕ್ಷೀತ್ ಮತ್ತು ಜೀವನ ಪ್ರಾರ್ಥನೆ ಮಾಡಿದರು. ಶಿಬಿರಾರ್ಥಿಗಳಾದ ಕುಮಾರಿ ಶ್ರಾಮ್ಯ ರೈ ಮತ್ತು ಪ್ರಮೋದ ತನ್ನ ತರಬೇತಿಯ ಅನುಭವ ಹಂಚಿಕೊಂಡರು.