ಗರ್ಡಾಡಿ: ಗರ್ಡಾಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಿಂದ ಸುಮಾರು 30 ಮಂದಿ ಭಕ್ತಾದಿಗಳು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ 5ನೇ ವರ್ಷದ ಪಾದಯಾತ್ರೆ ಕೈಗೊಂಡು ದೇವರ ದರ್ಶನ ಪಡೆದರು.
ವೃತಾಚಾರಣೆಯೊಂದಿಗೆ ಅಮ್ಮನಡೆಗೆ ನಮ್ಮ ನಡೆ 5ನೇ ವರ್ಷದ ಪಾದಯಾತ್ರೆಯ ಸಂದರ್ಭ ಗರ್ಡಾಡಿ ಚಾಮುಂಡೇಶ್ವರಿ ಕ್ಷೇತ್ರದ ಆಡಳಿತದಾರ ವಿಠಲರವರು ಉಪಹಾರ ವ್ಯವಸ್ಥೆ ಮಾಡಿದರು. ನಂತರ ರಾತ್ರಿಯ ಊಟದ ವ್ಯವಸ್ಥೆಯನ್ನು ಶಾಸಕ ಹರೀಶ್ ಪೂಂಜರವರು ಮಾಡಿದರು ಎಂದು ಭಕ್ತಾದಿಗಳು ತಿಳಿಸಿದರು.