September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಗುರುವಾಯನಕೆರೆ ಹೋಟೆಲ್ ರೇಸ್ ಇನ್ ನ ಆಹಾರ ವಿಭಾಗವಾದ “ಪೆಗ್ಸ್ ರೆಸ್ಟೋ ಬಾರ್ & ಫ್ಯಾಮಿಲಿ ರೆಸ್ಟೋರೆಂಟ್” ಹೊಸ ಆಡಳಿತದೊಂದಿಗೆ ಶುಭಾರಂಭ

ಗುರುವಾಯನಕೆರೆ : ಹೋಟೆಲ್ ರೇಸ್ ಇನ್ ನ ಆಹಾರ ವಿಭಾಗವಾದ “ಪೆಗ್ಸ್ ರೆಸ್ಟೋ ಬಾರ್ & ಫ್ಯಾಮಿಲಿ ರೆಸ್ಟೋರೆಂಟ್” ಡಿ. 7ರಿಂದ ಹೊಸ ಆಡಳಿತದೊಂದಿಗೆ ಪ್ರಖ್ಯಾತ ಹೋಟೆಲ್ ಉದ್ಯಮಿ ಬೆಳ್ತಂಗಡಿಯ ಜೋರ್ಡನ್ ಫ್ಯಾಮಿಲಿ ರೆಸ್ಟೋರೆಂಟ್ ನ ನಿರ್ವಹಣಾ ತಂಡದ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ವಿಶಿಷ್ಟ ಅನುಭವವನ್ನು ನೀಡಲು ಸಜ್ಜಾಗಿದೆ. ತಮ್ಮ ಕ್ಷೇತ್ರದಲ್ಲಿ ಉನ್ನತ ಮಟ್ಟದ ಯಶಸ್ಸು ಸಾಧಿಸಿರುವ ಈ ಹೊಸ ನಿರ್ವಹಣೆ, ಆಹಾರಪ್ರಿಯರಿಗೆ ವಿಶೇಷ ರುಚಿಗಳ ಸಂಭ್ರಮವನ್ನು ನೀಡುವ ಪ್ರಸಿದ್ಧ ತಾಣವಾಗುವ ಭರವಸೆ ನೀಡುತ್ತದೆ.

ಇದರ ಉದ್ಘಾಟನೆ ಮತ್ತು ಆಶೀರ್ವಚನವನ್ನು ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ಪ್ರಧಾನ ಧರ್ಮಗುರು ವಂ. ಫಾ. ವಾಲ್ಟರ್ ಡಿಮೆಲ್ಲೊ ನೆರವೇರಿಸಿದರು. ಸಿ. ವಿ. ಸಿ. ಸಂಸ್ಥೆಯ ಜೇಮ್ಸ್ ಡಿಸೋಜಾ, ಅಲ್ಫೋನ್ಸ್ ಡಿಸೋಜಾ, ಬೆಳ್ತಂಗಡಿ ಕ್ಯಾಥೋಲಿಕ್ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಅಧ್ಯಕ್ಷ ಹೆನ್ರಿ ಲೋಬೊ, ಗೋಕುಲ್ ದಾಸ್ ಭಂಡಾರ್ಕರ್, ವಿಜಯ್ ಡಿಕುನ್ಹಾ, ಉಜಿರೆ ಲಕ್ಷ್ಮೀ ಗ್ರೂಪ್ಸ್ ನ ಮೋಹನ್ ಕುಮಾರ್, ಜೈಸಾನ್ ಡಿಸೋಜಾ, ಅಶ್ವಿನಿ ಡಿಸೋಜಾ, ಹೆರಿಕ್ ಡಿಸೋಜಾ, ಫ್ರಾಂಕಿ ಡಿಸೋಜಾ, ಪೌಲಿನ್ ರೇಗೊ, ಜೆರಾಲ್ಡ್ ಕೊರೆಯ, ಜೆಸಿಂತಾ ಮೋನಿಸ್ ಮೊದಲಾದವರು ಉಪಸ್ಥಿತರಿದ್ದರು. ವಿನ್ಸೆಂಟ್ ಮೊರಾಸ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Related posts

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.366 ಕೋಟಿ ವಾರ್ಷಿಕ ವ್ಯವಹಾರ, ರೂ.1ಕೋಟಿ 64 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ 16 ಡಿವಿಡೆಂಟ್

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೇರ್ ವಿತರಣೆ

Suddi Udaya

ಭಟ್ಕಳ ಕರಿಕಲ್ ಧ್ಯಾನ ಮಂದಿರದ ಪ್ರತಿಷ್ಠಾಪನಾ ವರ್ಧಂತಿ ಉತ್ಸವ

Suddi Udaya

ಯ್ಯೂಟ್ಯೂಬರ್ ಗಳಾದ ಕೇರಳದ ಮನಾಫ್, ಅಭಿಷೇಕ್ ಎಸ್ ಐಟಿ ವಿಚಾರಣೆಗೆ ಹಾಜರು

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯತ್‌ಗೆ ನಾಮ ನಿರ್ದೇಶಿತ ಸದಸ್ಯರ ನೇಮಕ

Suddi Udaya

ಡಿ.27ರಂದು ನಡೆಯಬೇಕಾಗಿದ್ದ ಮಿತ್ತಬಾಗಿಲು ಸ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ ರದ್ದು

Suddi Udaya
error: Content is protected !!