ಉಜಿರೆ ಗ್ರಾಮ ಬಡೆಕೊಟ್ಟು ನಿವಾಸಿ ವೃದ್ಧೆ ಸುಶೀಲಾ ಇವರ ಮನೆಯ ಛಾವಣಿ ಕಳೆದ ಮಳೆಗಾಲದಲ್ಲಿ ಸುರಿದ ಭೀಕರ ಮಳೆಗೆ ಬೀಳುವ ಹಂತದಲ್ಲಿದ್ದು,ಇದನ್ನು ಮನಗಂಡು ಉಜಿರೆ ಬೆಳಾಲು ಹಾಗೂ ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ತಂಡದವರು ತಾತ್ಕಾಲಿಕವಾಗಿ ಟರ್ಪಾಲ್ ಹೊದೆಸಿ ಸರಿಪಡಿಸಿದ್ದರು.
ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಯೋಜನೆಯ ಕಾರ್ಯಕ್ರಮದಲ್ಲಿ ಇವರಿಗೆ ಹೊಸ ಮನೆಯು ನಿರ್ಮಾಣಗೊಳ್ಳಲಿದ್ದು ಇದರ ಅಂಗವಾಗಿ ಮನೆಯ ಪಾಯಕ್ಕಾಗಿ ಮಣ್ಣು ತೆಗೆಯುವ ಕೆಲಸವನ್ನು ಶ್ರಮದಾನದ ಮೂಲಕ ನಡೆಸಲಾಯಿತು.
ಈ ಸಂದರ್ಭದಲ್ಲಿ ಉಜಿರೆ ಬೆಳಾಲು ಮತ್ತು ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ಸೇವೆ ಸಲ್ಲಿಸಿ ವೃದ್ದೆ ಸುಶೀಲಾರವರಿಗೆ ಧೈರ್ಯ ತುಂಬಿದರು.