September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ವೃದ್ಧೆ ಸುಶೀಲಾ ರವರ ಮನೆಯ ಛಾವಣಿ ಬೀಳುವ ಹಂತದಲ್ಲಿದ್ದು ಶೌರ್ಯ ವಿಪತ್ತು ನಿರ್ವಹಣಾ ತಂಡದವರಿಂದ ತಾತ್ಕಾಲಿಕವಾಗಿ ಟರ್ಪಾಲ್ ಹೊದಿಕೆ

ಉಜಿರೆ ಗ್ರಾಮ ಬಡೆಕೊಟ್ಟು ನಿವಾಸಿ ವೃದ್ಧೆ ಸುಶೀಲಾ ಇವರ ಮನೆಯ ಛಾವಣಿ ಕಳೆದ ಮಳೆಗಾಲದಲ್ಲಿ ಸುರಿದ ಭೀಕರ ಮಳೆಗೆ ಬೀಳುವ ಹಂತದಲ್ಲಿದ್ದು,ಇದನ್ನು ಮನಗಂಡು ಉಜಿರೆ ಬೆಳಾಲು ಹಾಗೂ ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ತಂಡದವರು  ತಾತ್ಕಾಲಿಕವಾಗಿ ಟರ್ಪಾಲ್ ಹೊದೆಸಿ ಸರಿಪಡಿಸಿದ್ದರು.

ಇದೀಗ ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಯೋಜನೆಯ ಕಾರ್ಯಕ್ರಮದಲ್ಲಿ ಇವರಿಗೆ ಹೊಸ ಮನೆಯು ನಿರ್ಮಾಣಗೊಳ್ಳಲಿದ್ದು ಇದರ ಅಂಗವಾಗಿ ಮನೆಯ ಪಾಯಕ್ಕಾಗಿ ಮಣ್ಣು ತೆಗೆಯುವ ಕೆಲಸವನ್ನು ಶ್ರಮದಾನದ ಮೂಲಕ ನಡೆಸಲಾಯಿತು.

ಈ ಸಂದರ್ಭದಲ್ಲಿ ಉಜಿರೆ ಬೆಳಾಲು ಮತ್ತು ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ಸೇವೆ ಸಲ್ಲಿಸಿ ವೃದ್ದೆ ಸುಶೀಲಾರವರಿಗೆ ಧೈರ್ಯ ತುಂಬಿದರು.

Related posts

ಪದ್ಮುಂಜ ಪ.ಪೂ. ಕಾಲೇಜಿಗೆ ಶೇ. 100 ಫಲಿತಾಂಶ

Suddi Udaya

ಕಳೆಂಜ: ಶಿಬರಾಜೆಪಾದೆ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಮಂಡ್ಯದಲ್ಲಿ ನಡೆದ ಕೊಲೆ ಪ್ರಕರಣ: ಆರೋಪಿ ಜಯಚಂದ್ರ ಬಂಧನ

Suddi Udaya

ಕಳೆಂಜ: ಆರ್ವಿ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಶಿಬರಾಜೆ ಅಂಗನವಾಡಿ ಮಕ್ಕಳಿಗೆ ಕುರ್ಚಿ ಕೊಡುಗೆ

Suddi Udaya

ಕಾಶಿಪಟ್ಣ: ಕಲಾ ಪೋಷಕ ಕಿಶೋರ್ ರಾವ್ ನಿಧನ

Suddi Udaya

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಹಿಂದೂ ಧಾರ್ಮಿಕ ಸೇವಾ ಸಮಿತಿ, ಕನ್ಯಾಡಿ ಯವರಿಂದ ರೂ. 25 ಸಾವಿರ ದೇಣಿಗೆ

Suddi Udaya
error: Content is protected !!