ತೋಟತ್ತಾಡಿ: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ತೋಟತ್ತಾಡಿ, ಚಿಬಿದ್ರೆ ಇದರ ವಾರ್ಷಿಕೋತ್ಸವದ ಅಂಗವಾಗಿ ಮಹಿಳಾ ಬಿಲ್ಲವ ವೇದಿಕೆ ತೋಟತ್ತಾಡಿ, ಚಿಬಿದ್ರೆ ಇದರ ವತಿಯಿಂದ ಸಂಘದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರಗಿತು.
ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಪ್ರೇಮ ಹೊಸಮನೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಹಿಳಾ ಬಿಲ್ಲವ ವೇದಿಕೆಯ ಪದಾಧಿಕಾರಿಗಳಾದ ವಿನುತಾ ಡಿ ಮಜಲು, ಉಷಾ ಡಿ ಮಜಲು, ಪ್ರಮೀಳಾ ಕಕ್ಕಿಂಜೆ, ಲೀಲಾವತಿ ಬರಮೇಲು, ಸುಶೀಲ ಕಲ್ಲಗುಡ್ಡೆ, ಮೋಹಿನಿ ಗುವೆದಕಂಡ, ಕು.ತೇಜಸ್ವಿನಿ ತೋಟತ್ತಾಡಿ, ಕು. ಮೋಕ್ಷಿತ ತೋಟತ್ತಾಡಿ, ಸುಜಾತಾ ಪೊಯ್ಯೇದಡ್ಡ, ಪುಷ್ಪ ಹಾರಗಂಡಿ, ಚಿನ್ನಮ್ಮ ಡಿ.ಮಜಲು, ಸರೋಜಿನಿ ಡಿ.ಮಜಲು, ಸುಮತಿ ಬರಮೇಲು, ಪ್ರೇಮ ಬರಮೇಲು, ವಿಶಾಲಾಕ್ಷಿ ಅರಮನೆ, ಕು. ಕೃತಿಕಾ ಡಿ.ಮಜಲು, ಕು.ಸಂಹಿತಾ ಡಿ.ಮಜಲು,ಕು. ಸಾನ್ವಿ ಅರಮನೆ, ಕು. ಸಾನಿಧ್ಯ ಅರಮನೆ, ಅದ್ವಿತ್ ಪೊಯ್ಯೇದಡ್ಡ, ಮತ್ತಿತರರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹಿಳಾ ಬಿಲ್ಲವ ವೇದಿಕೆ ಎಲ್ಲ ಪದಾಧಿಕಾರಿಗಳಿಗೆ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ತೋಟತ್ತಾಡಿ, ಚಿಬಿದ್ರೆ ಇದರ ಅಧ್ಯಕ್ಷ ಸನತ್ ಕುಮಾರ್ ಮೂರ್ಜೆ ಧನ್ಯವಾದ ಸಲ್ಲಿಸಿದರು. ಯುವ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಮೂರ್ಜೆ ಎಲ್ಲ ಸದಸ್ಯರಿಗೂ ಲಘು ಉಪಹಾರದ ವ್ಯವಸ್ಥೆ ಮಾಡಿದರು.