September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹೃದಯಾಘಾತಕ್ಕೊಳಗಾದ ವ್ಯಕ್ತಿಯೊರ್ವರಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸಿ ಅಪಾಯದಿಂದ ಪಾರು ಮಾಡಿದ ಆಸ್ಪತ್ರೆಯ ಸಿಬ್ಬಂದಿ: ಮದ್ದಡ್ಕ ನಿವಾಸಿ ಪ್ರದೀಪ್ ನಾಯಕ್ ರವರ ಕಾರ್ಯಕ್ಕೆ ವ್ಯಾಪಕ ಪ್ರಸಂಸೆ

ಬೆಳ್ತಂಗಡಿ: ಹೃದಯಾಘಾತಕ್ಕೊಳಗಾದ ವ್ಯಕ್ತಿಯೊರ್ವರಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸಿ ಅಪಾಯದಿಂದ ಪಾರಾದ ಘಟನೆ ನಡೆದಿದ್ದು, ಚಿಕಿತ್ಸೆ ಒದಗಿಸಿದವರು ಸಾರ್ವಜನಿಕವಾಗಿ ಪ್ರಸಂಸೆಗೆ ಒಳಗಾಗಿದ್ದಾರೆ

    ಮಂಗಳೂರು ಕೆ.ಎಂ.ಸಿ.ಆಸ್ಪತ್ರೆಯ ಸಿಬ್ಬಂದಿ ಮದ್ದಡ್ಕ ನಿವಾಸಿ ಪ್ರದೀಪ್ ನಾಯಕ್ ಅವರು ಸಕಾಲದಲ್ಲಿ ಚಿಕಿತ್ಸೆ ಒದಗಿಸಿದ್ದು ಹೃದಯಘಾತಕ್ಕೊಳಗಾದ ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ಮಿಥುನ್ ಅವರು ಸಾವಿನಿಂದ ಪಾರಾಗಿದ್ದಾರೆ.

    ಘಟನೆ ವಿವರ : ಮಿಥುನ್ ಅವರು ಲಘು ಹೃಯಘಾತಕ್ಕೊಳಗಾಗಿದ್ದು, ಅವರ ಇಸಿಜಿ ರಿಪೋರ್ಟ್ ನ್ನು ಅವರ ಸಂಬಂಧಿಕರು ಪ್ರದೀಪ್ ನಾಯಕ್ ಕಳುಹಿಸಿದ್ದರು. ಈ ವರದಿಯನ್ನು ಪ್ರದೀಪ್ ನಾಯಕ್ ಅವರು ಖ್ಯಾತ ಹೃದಯತಜ್ಞ ಡಾ| ಪದ್ಮನಾಭ ಕಾಮತ್ ಅವರಿಗೆ ಕಳುಹಿಸಿದ್ದರು. ವರದಿಯನ್ನು ನೋಡಿ ಕಾಮತ್ ಅವರು ತಕ್ಷಣವೇ ರೋಗಿಯನ್ನು ಮಂಗಳೂರು ಆಸ್ಪತ್ರೆಗೆ ಕರೆತರಲು ಸೂಚಿಸಿದ್ದರು.ಅದರಂತೆ ಉಪ್ಪಿನಂಗಡಿ ಬಳಿಯ ತಣ್ಣೀರುಪಂತ ಅಳಕೆಯಿಂದ ಮಿಥುನ್ ಅವರನ್ನು ಕಾರಿನಲ್ಲಿ ಕರೆದುಕೊಂಡು ಮಂಗಳೂರಿಗೆ ಬರುತ್ತಿದ್ದರು. ಇದೇ ವೇಳೆ ಪ್ರದೀಪ್ ನಾಯಕ್ ಅವರು ತನ್ನ ಮನೆಯಿಂದ ಬಸ್ಸಿನಲ್ಲಿ ಹೊರಟಿದ್ದರು. ಮಿಥುನ್ ಅವರು ಪುಂಜಾಲಕಟ್ಟೆ ಕಳೆದು ಸಾಗುತ್ತಿರುವಾಗ ಅವರಿಗೆ ಎದೆನೋವು ತೀವ್ರವಾಯಿತು. ಈ ವಿಚಾರ ತಿಳಿದ ಪ್ರದೀಪ್ ನಾಯಕ್ ಅವರು ವಗ್ಗ ಬಳಿ ಬಸ್ಸಿನಿಂದ ಇಳಿದು,ಮಿಥುನ್ ಅವರಿಗಾಗಿ ಕಾದಿದ್ದರು.ಅವರ ಬಳಿ ಹೃದಯಾಘಾತವಾದ ಕೂಡಲೇ ಅಗತ್ಯವಾಗಿ ನೀಡಬೇಕಾದ ಔಷಧಿಯನ್ನು ಇರಿಸಿಕೊಂಡಿದ್ದು, ರೋಗಿಗೆ ನೀಡಿದರು. ಇದರಿಂದ ಮಿಥುನ್ ಅವರಿಗೆ ಮತ್ತೆ ಹೃದಯಾಘಾತವಾಗುವುದು ತಪ್ಪಿತು. ಬಳಿಕ ಅವರು ಅದೇ ಕಾರಿನಲ್ಲಿ ಮಂಗಳೂರಿಗೆ ಸಾಗುತ್ತಿರುವಾಗ ಟ್ರಾಫಿಕ್ ಜಾಮ್ ಇರುವ ಕಾರಣ ಕೆ.ಎಂ.ಸಿ.ಯ ಅಂಬ್ಯುಲೆನ್ಸ್ ವಾಹನಕ್ಕೆ ಕರೆ ಮಾಡಿ ಬರಿಸಿ, ರೋಗಿಯನ್ನು ಶೀಘ್ರವಾಗಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು.

    ‌ ಇದೀಗ ಮಿಥುನ್ ಅವರಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಆರೋಗ್ಯವಾಗಿದ್ದಾರೆ ಎಂದು ವೈದ್ಯ ಡಾ| ಪದ್ಮನಾಭ ಕಾಮತ್ ತಿಳಿಸಿದ್ದು, ಪ್ರದೀಪ್ ನಾಯಕ್ ಅವರ ಸಕಾಲಿಕ ಕಾರ್ಯವೈಖರಿಗೆ ಶ್ಲಾಘನೆಯನ್ನು ಅವರು ತಿಳಿಸಿದ್ದಾರೆ.

    Related posts

    ನಾಳ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸೇವೆಯಾಟ ಪ್ರಾರಂಭದ ಸಭಾ ಕಾರ್ಯಕ್ರಮ

    Suddi Udaya

    ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ

    Suddi Udaya

    ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಬೆಳಾಲು ಶ್ರೀ ಧ.ಮಂ.ಅ.ಪ್ರೌ. ಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ

    Suddi Udaya

    ಧರ್ಮಸ್ಥಳ: ಅಮೃತವರ್ಷಿಣಿ ಸಭಾಭವನದಲ್ಲಿ ರಾಮನಾಮ ತಾರಕ ಮಂತ್ರ ಪಠಣ

    Suddi Udaya

    ಇಂದಬೆಟ್ಟು: ಹೆಬ್ಬಾವನ್ನು ಬೇಟೆಯಾಡಿದ ಕಾಳಿಂಗ ಸರ್ಪ: ಸ್ನೇಕ್ ಅಶೋಕ್ ರವರಿಂದ ಹೆಬ್ಬಾವು ರಕ್ಷಣೆ

    Suddi Udaya

    ಅಳದಂಗಡಿ ಸತ್ಯದೇವತಾ ದೈವಸ್ಥಾನದಲ್ಲಿ ಹನುಮೋತ್ಸವ ತಯಾರಿಯ ಪೂರ್ವಭಾವಿ ಸಭೆ

    Suddi Udaya
    error: Content is protected !!