25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕು| ಅದಿತಿ ಮುಗೆರೋಡಿ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ದಾಖಲೆ”

ಬೆಳ್ತಂಗಡಿ; ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪದ್ಮುಂಜ ಇಲ್ಲಿಯ 5ನೇ ತರಗತಿ ವಿದ್ಯಾರ್ಥಿ ಕುಮಾರಿ ಅದಿತಿ ಮುಗೆರೋಡಿ ಇವರು ಒಂದು ನಿಮಿಷದಲ್ಲಿ ಮೊಣಕೈಯಿಂದ ಮೊಣಕೈಗೆ ಗರಿಷ್ಠ ಸಂಖ್ಯೆಯ ಪುಶ್ ಅಪ್‌ ( maximum number of knee to elbow push ups in one minute) ನಲ್ಲಿ 138 crunches ಮಾಡುವ ಮೂಲಕ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ದಾಖಲೆ ಬರೆದಿದ್ದಾರೆ.

ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಅದಿತಿ ಅವರು, ಆವಿಸ್ಕಾರ ಯೋಗ ಮಂಗಳೂರು ಇದರ ಯೋಗ ಗುರುಗಳಾದ ಕುಶಾಲಪ್ಪಗೌಡ ನೆಕ್ಕರಾಜೆ ಇವರ ಶಿಷ್ಯೆಯಾಗಿದ್ದಾರೆ. ಇವರು ಕರ್ನಾಟಕ ರಾಜ್ಯ ಡಾಕ್ಟರ್ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯನ್ನು ಈಗಾಗಲೇ ಮುಗಿಸಿದ್ದಾರೆ. ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ ರಿಜಿಸ್ಟರ್ಡ್ ಪುತ್ತೂರು ಇದರ ನಿರ್ದೇಶಕ ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್ ಇವರ ಶಿಷ್ಯೆ ವಿದುಷಿ ಶ್ರೀಮತಿ ಡಿಂಪಲ್ ಶಿವರಾಜ್ ಇವರಲ್ಲಿ ಏಳು ವರ್ಷಗಳಿಂದ ಶ್ರೀ ಶಾರದಾ ಕಲಾ ಶಾಖೆ ಪದ್ಮುಂಜ ಇಲ್ಲಿ ಭರತನಾಟ್ಯವನ್ನು ಅಭ್ಯಸಿಸುತ್ತಿದ್ದಾರೆ.


ಕುಮಾರಿ ಅದಿತಿ ಇವರನ್ನು ಆವಿಷ್ಕಾರ ಯೋಗ ಮಂಗಳೂರು ಮತ್ತು ಸಹ ಸಂಘಟಕರ ನೇತೃತ್ವದಲ್ಲಿ ಪದ್ಮುಂಜ ರೈತ ಸಭಾಭವನದಲ್ಲಿ ನಡೆದ ನಿರಂತರ 12 ಗಂಟೆಗಳ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

ಇವರು ಕೃಷಿಕ ದಂಪತಿ ಮುಗೆರೋಡಿ ಮಂಜುಳಾ ಮತ್ತು ಪುರುಷೋತ್ತಮ ಗೌಡ ಮುಗೆರೋಡಿ ಇವರ ಪುತ್ರಿಯಾಗಿದ್ದಾರೆ.

Related posts

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಿರ್ವಹಣಾ ತರಬೇತಿ

Suddi Udaya

ವೇಣೂರು ದೇವಾಡಿಗರ ಸೇವಾ ವೇದಿಕೆ ವತಿಯಿಂದ ಶರನ್ನವರಾತ್ರಿ ಪ್ರಯುಕ್ತ ಶ್ರೀ ಶಾರದಾ ಪೂಜೆ

Suddi Udaya

ನಾರಾವಿ ಉದ್ಯಮಿ ಸುಂದರ ಕೋಟ್ಯಾನ್ ನಿಧನ

Suddi Udaya

ಸುಲ್ಕೇರಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀರಾಮ ಪ್ರೌಢಶಾಲಾ ಪ್ರಾರಂಭೋತ್ಸವ

Suddi Udaya

ಬೆಳ್ತಂಗಡಿ: ಮಾತೃ ವೃಂದ ಶಿಶುಪಾಲನ ಕೇಂದ್ರ ಉದ್ಘಾಟನೆ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯವರನ್ನು ಗೌರವಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ

Suddi Udaya
error: Content is protected !!