ಬೆಳ್ತಂಗಡಿ: ಶ್ರೀ ಧರ್ಮಸ್ಥಳ ದೀಪೋತ್ಸವದ ಪ್ರಯುಕ್ತ ಪಾದಯಾತ್ರೆಯ ಕಾರ್ಯಕ್ರಮದಲ್ಲಿ ಭಗವಾನ್ ಶಿರಡಿ ಸಾಯಿ ಸತ್ಯ ಸಾಯಿ ಸೇವಾ ಕ್ಷೇತ್ರ ಶ್ರೀ ಸಾಯಿ ನಗರ ಹಳೆಕೋಟೆ ಬೆಳ್ತಂಗಡಿ ಇಲ್ಲಿನ ಸದಸ್ಯರಿಂದ ಭಜನಾ ಸಂಕೀರ್ತನ್ ಕಾರ್ಯಕ್ರಮ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನ ಉಜಿರೆ ಇಲ್ಲಿಂದ ಪ್ರಾರಂಭಗೊಂಡು ನಂತರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಭಜನಾ ಸಂಕೀರ್ತನ್ ಕಾರ್ಯಕ್ರಮ ಜರಗಿತು.
ನಂತರ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪ್ರಸಾದ ಸ್ವೀಕರಿಸಿ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಹಾಗೂ ಡಿ ಹರ್ಷೇಂದ್ರ ಕುಮಾರ್ ಮತ್ತು ಕುಟುಂಬದವರು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಪಾದಯಾತ್ರೆ ಸಮಿತಿಯವರು ಸಹಕರಿಸಿದರು. ಕಾರ್ಯಕ್ರಮ ಭಗವಾನ್ ಶಿರಡಿ ಸಾಯಿ ಸತ್ಯ ಸಾಯಿ ಸೇವಾ ಕ್ಷೇತ್ರ ಶ್ರೀ ಸಾಯಿ ನಗರ ಹಳೆಕೋಟೆ ಬೆಳ್ತಂಗಡಿ ಹಾಗೂ ಸನಾತನ ಸಾರಥಿ ಸೇವಾ ಟ್ರಸ್ಟ್ ರಿ ಬೆಳ್ತಂಗಡಿ ಇಲ್ಲಿನ ಅಧ್ಯಕ್ಷ ಸಿ ಎಚ್ ಪ್ರಭಾಕರ್ ಹಾಗೂ ಸದಸ್ಯರೆಲ್ಲರೂ ಸಹಕರಿಸಿದರು.