ಉಜಿರೆ: ಓಡಲ ಮುಂಡತ್ತೋಡಿ ಪಾದೆಮನೆಯ ದಿ. ಸಾಂತು ಪೂಜಾರಿ ಪುತ್ರ ಶೇಖರ ಪೂಜಾರಿ (47 ವ ) ಡಿ. 11 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಇವರು ಉಜಿರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘದ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ಪತ್ನಿ ವಾರಿಜಾ, ಸಹೋದರರಾದ ವಿಜಯ ಪೂಜಾರಿ, ಚಿದಾನಂದ ಪೂಜಾರಿ, ಸಹೋದರಿಯರಾದ ವಸಂತಿ, ಅಖಿಲಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.