ಉರುವಾಲು : ಶ್ರೀ ವೀಘ್ನೇಶ್ವರ ಭಜನಾ ಮಂದಿರ ಕಾರಿಂಜ ಬೈತಾರು ಉರುವಾಲು ಇಲ್ಲಿಯ 17 ನೇ ವರ್ಷದ ನಗರ ಭಜನೆಯ ಮಂಗಳೋತ್ಸವ ಕಾರ್ಯಕ್ರಮವು ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ಕಾರಿಂಜ ಬೈತಾರು ಇಲ್ಲಿ ನಡೆಯಿತು.
ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಸತ್ಯನಾರಾಯಣ ಪೂಜೆ, ಹಾಗೂ ಸಾಯಂಕಾಲ ಆಹ್ವಾನಿತ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಮತ್ತು ರಂಗಪೂಜೆ ನಡೆಯಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.