ಕಲ್ಲೇರಿ: ತಣ್ಣೀರುಪಂತ ಸೇವಾ ಸಹಕಾರಿ ಸಂಘದ ಹಳೆ ಕಟ್ಟಡ ಕಲ್ಲೇರಿಯಲ್ಲಿ “ಕಲ್ಲೇರಿ ವೆಲ್‌ನೆಸ್ ಸೆಂಟರ್ ನ ಉದ್ಘಾಟನೆಯು ಡಿ.12ರಂದು ಬೆಳಿಗ್ಗೆ ಗಂಟೆ 10.30 ಕ್ಕೆ ನಡೆಯಲಿದೆ ಎಂದು ಹಿರಿಯ ದಂತ ವೈದ್ಯ ಡಾ.ರಾಜಾರಾಮ್ ಕೆ.ಬಿ ತಿಳಿಸಿದ್ದಾರೆ.
ವೆಲ್ ನೆಸ್ ಸಂಟರ್ ನಲ್ಲಿ ದಂತ ಚಿಕಿತ್ಸೆ, ಆಯುರ್ವೇದ, ಮಕ್ಕಳ ತಜ್ಞರು, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು, ಎಲುಬು ಮತ್ತು ಕೀಲು ರೋಗ ತಜ್ಞರು, ಎಲೋಪತಿ, ಪ್ರಕೃತಿ ಚಿಕಿತ್ಸೆಗಳು, ಲ್ಯಾಬ್, ಇಸಿಜಿ, ಡೇ ಕೇರ್‌ಗಳು ಲಭ್ಯವಿರುತ್ತದೆ. ಜೊತೆಗೆ ಅಂಬ್ಯುಲೆನ್ಸ್ ಸರ್ವೀಸ್ ಕೂಡ ಇರುತ್ತದೆ ಎಂದವರು ತಿಳಿಸಿದರು.
ಪ್ರತಿ ದಿನ ಬೆಳಿಗ್ಗೆ 8.30 ರಿಂದ ಸಂಜೆ 7.30 ರವರೆಗೆ ತಜ್ಞ ವೈದರಾದ ಹಿರಿಯ ದಂತ ವೈದ್ಯ ಡಾ| ರಾಜಾರಾಮ್ ಕೆ.ಬಿ., ಮಕ್ಕಳ ತಜ್ಞ ಡಾ| ಕೃಷ್ಣಾನಂದ ಕೆ., ಎಲುಬು ಮತ್ತು ಕೀಲುರೋಗ ತಜ್ಞ ಡಾ| ಲಿಖಿತ್ ಫೆರ್ನಾಂಡಿಸ್ ಲಭ್ಯವಿರುತ್ತಾರೆ.ವಾರದ ರಜೆ ಭಾನುವಾರವಾಗಿರುತ್ತದೆ.