ಬೆಳ್ತಂಗಡಿ: ಇಲ್ಲಿಯ ವಾಣಿ ಪದವಿ ಪೂರ್ವ ಕಾಲೇಜಿನ ವಿಂಶತಿ ಸಂಭ್ರಮ ಹಾಗೂ 20ನೇ ವರ್ಷದ ಕಾಲೇಜಿನ ವಾರ್ಷಿಕೋತ್ಸವವು ಡಿ. 11 ರಂದು ಕಾಲೇಜು ಆವರಣದಲ್ಲಿ ಜರುಗಿತು.
ವಿಂಶತಿ ಸಂಭ್ರಮವನ್ನು ಬೆಂಗಳೂರು ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ. ಹರೀಕೃಷ್ಣ ಬಂಟ್ವಾಳ ಉದ್ಘಾಟಿಸಿ ಮಾತನಾಡಿದರು.
ಉತ್ಕರ್ಷ ಸಾಂಸ್ಕೃತಿಕ -ಶೈಕ್ಷಣಿಕ ಸ್ಪರ್ಧೆಯನ್ನು ಬೆಳಾಲು ಶ್ರೀ ಕ್ಷೇತ್ರ ಆರಿಕೋಡಿ ಧರ್ಮದರ್ಶಿ ಹರೀಶ್ ಆರಿಕೋಡಿ ಉದ್ಘಾಟಿಸಿದರು.
ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ , ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ವಾಣಿ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಎಚ್. ಪದ್ಮಗೌಡ, ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ, ವಾಣಿ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ ಸೋಮೇ ಗೌಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿ ಪ್ರಸಾದ್,. ಉಪಪ್ರಾಂಶುಪಾಲ ವಿಷ್ಣು ಪ್ರಕಾಶ್ ಮುಖ್ಯೋಪಾಧ್ಯಯರು ಲಕ್ಷ್ಮೀ ನಾರಾಯಣ, ಶಿಕ್ಷಕ ರಕ್ಷಕ ಸಂಘ ದ ಜನರ್ಧನ್ ಗೌಡ, ಕಾಲೇಜು ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಕಾಲೇಜು ಪ್ರಾಂಶುಪಾಲರು ಯದುಪತಿ ಗೌಡ ಸ್ವಾಗತಿಸಿ, ಉಪನ್ಯಾಸಕಿ ಪ್ರಜ್ವಲ ಕಾರ್ಯಕ್ರಮ ನಿರೂಪಸಿದರು. ಉಪನ್ಯಾಸಕಿ ಮೀನಾಕ್ಷಿ. ಎನ್ ಧನ್ಯವಾದವಿತ್ತರು.