25.9 C
ಪುತ್ತೂರು, ಬೆಳ್ತಂಗಡಿ
March 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಡಿರುದ್ಯಾವರ ಕುಕ್ಕಾವು ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

ಕಡಿರುದ್ಯಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಿರುದ್ಯಾವರ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವು ಬಂಗಾಡಿ ಸಹಕಾರಿ ವ್ಯವಸಾಯಿಕ ಬ್ಯಾಂಕ್ ಕಡಿರುದ್ಯಾವರ ಶಾಖೆಯ ಸಭಾಭವನದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಡಿರುದ್ಯಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಾವತಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ನಾನು ಕೂಡ ಒಬ್ಬ ಜ್ಞಾನ ವಿಕಾಸ ಕೇಂದ್ರದ ಸದಸ್ಯೆಯಾಗಿದ್ದು ಪ್ರಸ್ತುತ ಗ್ರಾಮಪಂಚಾಯತ್ ಅಧ್ಯಕ್ಷೆ ಯಾಗಿರುತ್ತೇನೆ. ಇವತ್ತು ನನಗೆ ವೇದಿಕೆಯ ಮುಂದೆ ನಿಂತು ಮಾತನಾಡುವ ಧೈರ್ಯ ಬoದಿದೆ. ಜ್ಞಾನ ವಿಕಾಸ ಕೇಂದ್ರ ನಮ್ಮ ಜ್ಞಾನ ವನ್ನು ವೃದ್ಧಿಸುವುದಲ್ಲದೆ ಪ್ರತಿಭೆಗಳನ್ನು ಹೊರ ಹಾಕಲು ಅವಕಾಶ ಕಲ್ಪಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದ ಗೌರವಾನ್ವಿತ ನಿರ್ದೇಶಕ ವಿಠಲ ಪೂಜಾರಿ ಮಾತನಾಡುತ್ತಾ ಜ್ಞಾನ ವಿಕಾಸ ಕಾರ್ಯಕ್ರಮದ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸುತ್ತಾ ಹಿಂದಿನ ಕಾಲದಲ್ಲಿ ಇದ್ದ ಸಂಸ್ಕಾರವನ್ನು ಮರೆಯಬಾರದು ಹೆಣ್ಣು ಸಂಸಾರದ ಕಣ್ಣು ಒಂದು ಕುಟುಂಬ ಉತ್ತಮ ರೀತಿಯಲ್ಲಿ ಅಭಿವೃದ್ದಿ ಹೊಂದ ಬೇಕಾದರೆ ಹೆಣ್ಣಿಗೆ ಸಂಸಾರವನ್ನು ಸರಿದೂಗಿಸುವ ಜಾಣ್ಮೆ ಇರಬೇಕು. ಜ್ಞಾನ ವಿಕಾಸ ಕೇಂದ್ರದಲ್ಲಿ ಸಂಸ್ಕೃತಿ ಸಂಸ್ಕಾರದ ಜೊತೆಗೆ ಹೆಣ್ಣು ಎಲ್ಲಾ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬೇಕಾದ ಜ್ಞಾನವನ್ನು ನೀಡುತ್ತಿದ್ದು ಕೇಂದ್ರದ ಸಭೆಗೆ ಎಲ್ಲರೂ ಉತ್ತಮ ರೀತಿಯಲ್ಲಿ ಭಾಗವಹಿಸುವಂತೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನವಿಕಾಸ ಕೇಂದ್ರದ ಸದಸ್ಯೆ ಶ್ರೀಮತಿ ಗೀತಾ ವಹಿಸಿ ಜ್ಞಾನವಿಕಾಸ ಕೇಂದ್ರದಿಂದಾದ ಪ್ರಯೋಜನಗಳ ಬಗ್ಗೆ ಕೇಂದ್ರಕ್ಕೆ ನಾವು ಸಂತೋಷದಿಂದ ಭಾಗವಹಿಸುತಿದ್ದು ನಮ್ಮ ಪ್ರತಿಭೆಗಳನ್ನು ಹೊರಹಾಕಲು ಇದೊಂದು ಉತ್ತಮ ವೇದಿಕೆಯಾಗಿದ್ದು ಜ್ಞಾನ ವಿಕಾಸ ಕೇಂದ್ರವು ನಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಬಂಗಾಡಿ ಸಹಕಾರಿ ವ್ಯವಾಸಾಯಿಕ ಬ್ಯಾಂಕಿನ ಅಧ್ಯಕ್ಷ ಹರೀಶ್ ಸಾಲಿಯನ್, ಮಹಿಳಾ ಮಂಡಲದ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರರವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ವೇದಿಕೆಯಲ್ಲಿ ಬಂಗಾಡಿ ಸಹಕಾರಿ ವ್ಯವಸಾಯಿಕ ಬ್ಯಾಂಕಿನ ನಿರ್ದೇಶಕ ಆನಂದ, ಕುಕ್ಕಾವು ಒಕ್ಕೂಟದ ಅಧ್ಯಕ್ಷ ನಾರಾಯಣ್ , ತಾಲೂಕಿನ ಯೋಜನಾಧಿಕಾರಿ ಸುರೇಂದ್ರ , ಜ್ಞಾನವಿಕಾಸ ಕಾರ್ಯಕ್ರಮದ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಶ್ರೀಮತಿ ಅಮೃತ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜ್ಞಾನವಿಕಾಸದ ಸದಸ್ಯರಾದ ಶ್ರೀಮತಿ ಗೀತಾ ಮತ್ತು ಶ್ರೀಮತಿ ಸಿದ್ದಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಸಮನ್ವಯಧಿಕಾರಿ ಮಧುರಾ ವಸಂತ್ ಸೇವಾಪ್ರತಿನಿಧಿ ರಶ್ಮಿ ಹಾಗೂ ಸುರೇಖಾ ಉಪಸ್ಥಿತರಿದ್ದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಯತೀಕ್ಷ ನಿರೂಪಿಸಿದ ಕಾರ್ಯಕ್ರಮದಲ್ಲಿ ತ್ರಿವೇಣಿ ಸ್ವಾಗತಿಸಿ ಜಯಶ್ರೀ ಧನ್ಯವಾದ ನೀಡಿದರು.

Related posts

ಗ್ರಾ.ಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ದಿನಾಂಕ ನಿಗದಿ

Suddi Udaya

ನಿಡಿಗಲ್-ಕಲ್ಮಂಜ ಗೆಳೆಯರ ಬಳಗದ ಪದಾಧಿಕಾರಿಗಳ ಆಯ್ಕೆ

Suddi Udaya

ರಾಜ್ಯಮಟ್ಟಕ್ಕೆ ಆಯ್ಕೆಯಾದ ಕುತ್ಲೂರು ಗ್ರಾಮಕ್ಕೆ ದ.ಕ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಅಭಿನ೦ದನಾ ಪತ್ರ

Suddi Udaya

ಕಡಿರುದ್ಯಾವರ : ಕಾನರ್ಪ ಒಕ್ಕೂಟ ಅನ್ನಪೂರ್ಣೇಶ್ವರಿ ಸಂಘದ ಸದಸ್ಯೆಯ ಮನೆ ದುರಸ್ತಿ ಕಾರ್ಯ ನಡೆಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು

Suddi Udaya

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕವನ ವಾಚನ ಸ್ಪರ್ಧೆ : ಕು | ನಿತ್ಯಶ್ರೀ ಖಂಡಿಗ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಕುತ್ಲೂರು ಸ.ಉ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ

Suddi Udaya
error: Content is protected !!