25.1 C
ಪುತ್ತೂರು, ಬೆಳ್ತಂಗಡಿ
April 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದಲ್ಲಿ ಬೆಳ್ತಂಗಡಿಯ ಧೃತೇಶ್ ಪಕ್ಕಳರಿಗೆ ಚಿನ್ನದ ಪದಕ

ತಣ್ಣೀರುಪಂತ: ನೇಪಾಳದಲ್ಲಿ ನ.28ರಿಂದ ಡಿ.2ರವರೆಗೆ ನೇಪಾಳ ಪಿಸಿಎ ಸ್ಪೋಟ್ ೯ ಇವೆಂಟ್ಸ್ ಮ್ಯಾನೇಜ್ಮೆಂಟ್ ಆಯೋಜಿಸಿರುವ ಇಂಡೋ- ನೇಪಾಳ ಅಂತಾರಾಷ್ಟ್ರೀಯ ಆಹ್ವಾನಿತ ಪುರುಷ ಮತ್ತು ಮಹಿಳೆಯರ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್-2024ರಲ್ಲಿ ಅಂತಾರಾಷ್ಟ್ರೀಯ ವಾಲಿಬಾಲ್ ಟೂರ್ನಮೆಂಟ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಬೆಳ್ತಂಗಡಿಯ ಧೃತೇಶ್ ಸಿ. ಪಕ್ಕಳ ಚಿನ್ನದ ಪದಕ ಪಡೆದಿದ್ದಾರೆ.

ಗೋವಾದಲ್ಲಿ ಯುವ ಮತ್ತು ಕ್ರೀಡಾ ಪ್ರಮೋಷನ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ 4ನೇ ವೈಎಸ್‌ಪಿಎ ರಾಷ್ಟ್ರೀಯ ವಾಲಿಬಾಲ್ ಫೆಡರೇಶನ್ ಕಪ್- 2024ರಲ್ಲಿ ಬೆಳ್ತಂಗಡಿ ತಾಲೂಕಿನ ಧೃತೇಶ್ ಸಿ. ಪಕ್ಕಳ ಪ್ರತಿನಿಧಿಸಿರುವ ಕರ್ನಾಟಕ ತಂಡ ಚಿನ್ನದ ಪದಕ ಗಳಿಸಿದ್ದು, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದರು.

ಇವರು ಪುತ್ತಿಲ ಗ್ರಾಮದ ಕುಂಡಡ್ಕದ, ಮಡಂತ್ಯಾರು ಶ್ರೀ ದೇವಿ ಟ್ರಾವೆಲ್ಸ್ ಮಾಲಕ ಚಂದ್ರಹಾಸ ಪಕ್ಕಳ – ಮಡಂತ್ಯಾರು ಮಹಿಳಾ ಮಂಡಲದ ಕಾರ್ಯದರ್ಶಿ ರೋಹಿಣಿ ಸಿ. ಪಕ್ಕಳ ದಂಪತಿ ಪುತ್ರ. ದೆಹಲಿಯಲ್ಲಿ 2023ರಲ್ಲಿ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ನಡೆದ 44ನೇ ಸಬ್ ಜ್ಯೂನಿಯರ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.

ಶಾಲಾ ದಿನಗಳಲ್ಲಿಯೇ ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಧೃತೇಶ್, ಪ್ರಸ್ತುತ ಮಂಗಳೂರಿನ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ತಂಗಡಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಗಿಸಿ ಪದವಿ ಪೂರ್ವ ಶಿಕ್ಷಣವನ್ನು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪೂರೈಸಿದ್ದಾರೆ. ಇವರಿಗೆ ಪ್ರವೀಣ್ ಉಜಿರೆ, ಸುಧೀನ್ ಪೂಜಾರಿ ಉಜಿರೆ, ಸಂದೇಶ್ ಪೂಂಜ ಉಜಿರೆ, ಕೌಶಲ್ ಮಂಗಳೂರು ಮತ್ತು ಅರುಣ್ ಮಾರ್ಗದರ್ಶನ ನೀಡಿದ್ದಾರೆ.

Related posts

ಬೆಳ್ತಂಗಡಿ: ಸರ್ವೆಯರ್ ವಿಶ್ವನಾಥ್ ರಾವ್ ಹೃದಯಾಘಾತದಿಂದ ಸಾವು

Suddi Udaya

ಉಜಿರೆ ಎಸ್. ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಉದ್ಯಮಶೀಲತೆ ಕಾರ್ಯಾಗಾರ

Suddi Udaya

ನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮಾಗಮ

Suddi Udaya

ನಿಡ್ಲೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ

Suddi Udaya

ಬೆಳ್ತಂಗಡಿ: ಡಯಾಲಿಸಿಸ್ ಕೇಂದ್ರದ ಕೊರತೆಗಳಿಗೆ ಮುಕ್ತಿ : ಆರೋಗ್ಯ ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮತ್ತು ರೋಟರಿ ಸಂಸ್ಥೆಯವರಿಗೆ ಬಂಗೇರರವರಿಂದ ಅಭಿನಂದನೆ

Suddi Udaya

ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಬೆಳ್ತಂಗಡಿ, ಧರ್ಮಸ್ಥಳ, ಗುರುವಾಯನಕೆರೆಯ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಮತಯಾಚನೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ