ಪದ್ಮುಂಜ: ಭಾರತದ ಋಷಿ ಪರಂಪರೆಯ ಯೋಗ ವಿದ್ಯೆಯು ಜನ ಸಾಮಾನ್ಯರ ಆರೋಗ್ಯಕ್ಕೆ ಒಳ್ಳೆಯ ಸಾಧನ, ಯೋಗ ಅಭ್ಯಾಸ ಆರೋಗ್ಯವಂತ ದೀರ್ಘಾಯುಷ್ಯವನ್ನು ಪಡೆಯಬಹುದು. ಹಿಂದಿನ ಕಾಲದಲ್ಲಿ ಋಷಿ ಮುನಿಗಳು ಯೋಗ ವಿದ್ಯೆಯನ್ನು ಜನರಿಗೆ ನೀಡಿದರು ಎಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಮುಂಡೂರು, ಧರ್ಮದರ್ಶಿ ಆನಂದ ಗೌಡ ಮುಂಡೂರು ಅವರು ಪದ್ಮುಂಜ ಕೃಷಿ ಪತ್ತಿನ ಸಹಕಾರಿ ನಿಯಮಿತ ಪದ್ಮುಂಜ ಇದರ ವಠಾರದಲ್ಲಿ ಆವಿಷ್ಕಾರ ಯೋಗ ಮಂಗಳೂರು ಹಾಗೂ 13 ಸಹ ಸಂಘಟನೆಗಳ ನೇತೃತ್ವದ 12 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ಮನೋಹರ ಅಂತರ, ಮೊಕ್ತೇಸರರು ಶ್ರೀ ಕ್ಷೇತ್ರ ಮುಗೇರಡ್ಕ ಶ್ರೀಮತಿ ಶಾರದಾ ರೈ ಮುಗೆರೋಡಿ ಉಪಸ್ಥಿತರಿದ್ದರು. ಅಶೋಕ ಗೌಡ ಪಾಂಜಾಳ ಉಪಧ್ಯಕ್ಷರು. ಸಿ.ಎ. ಬ್ಯಾಂಕು, ಪದ್ಮುಂಜ ದೀಪ ಪ್ರಜ್ವಲನ ಮಾಡಿಸಿದರು. ಯೋಗ ಗುರು ಕುಶಾಲಪ್ಪ ಗೌಡ ಪ್ರಸ್ತಾವಿಕವಾಗಿ ಮಾತನಾಡಿದ ಶಿಬಿರದ ಉಪದೇಶವನ್ನು ಹೇಳಿದರು. ಉದಯ ಬಿ.ಕೆ ನ್ಯಾಯವಾದಿ, ಕಾರ್ಯಕ್ರಮ ನಿರೂಪಿಸಿದರು.