November 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿರಾಜ್ಯ ಸುದ್ದಿ

ಗುಜರಾತ್ ನಲ್ಲಿ ಭೀಕರ ರಸ್ತೆ ಅಪಘಾತ: ಚಾರ್ಮಾಡಿಯ ಶರೀಫ್ ಮೂಸ ಕುಂಞ ಮೃತ್ಯು

ಬೆಳ್ತಂಗಡಿ: ಗುಜರಾತ್ ರಾಜ್ಯದ ಸೂರತ್ ಸಮೀಪದ ಬಚೂರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಚಾರ್ಮಾಡಿಯ ಆದಂ ಎಂಬವರ ಪುತ್ರ ಷರೀಫ್ ಮೂಸ ಕುಂಞ(46ವ) ಮೃತಪಟ್ಟಿರುವ ಬಗ್ಗೆ ಡಿ. 11 ರಂದು ವರದಿಯಾಗಿದೆ.

ಕೆ. ಆರ್. ಎಸ್ ಪಕ್ಷದ ನೇತೃತ್ವದಲ್ಲಿ ನಡೆದ ಸ್ಟಾಪ್ ರೇಪ್’ ಪ್ರತಿಭಟನೆಯಲ್ಲಿ ಭಾಗವಹಿಸಲು ಬಚೂರದಲ್ಲಿ ರಸ್ತೆ ಬದಿ ಪಾದಯಾತ್ರೆ ಹೋಗುತ್ತಿದ್ದ ಐವರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂಲತಃ ಚಾರ್ಮಾಡಿಯವರಾಗಿದ್ದು ಪ್ರಸ್ತುತ ಮದ್ದಡ್ಕದಲ್ಲಿ ವಾಸವಾಗಿರುವ ಶರೀಫ್ ಮೂಸ ಕುಂಞಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಶರೀಫ್ ರವರ ಮೃತದೇಹವು ಇಂದು (ಡಿ.12) ಸಂಜೆ ಚಾರ್ಮಾಡಿ ಮನೆಗೆ ಬರಲಿದೆ.

Related posts

ಮಚ್ಚಿನ ಮೂಲ್ಯ ಯಾನೆ ಕುಂಬಾರರ ಸಂಘದ ಅಧ್ಯಕ್ಷರಾಗಿ ಮನೋಜ್ ಬಂಗಿದೊಟ್ಟು ಆಯ್ಕೆ

Suddi Udaya

ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ದ.ಕ ಜಿಲ್ಲೆಯ ಪಂಚಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಸ್ಥಾನಕ್ಕೆ ಜಿ.ಪಂ. ಮಾಜಿ ಸದಸ್ಯ ಹಾಗೂ ಪಂಚಗ್ಯಾರಂಟಿ ಜಿಲ್ಲಾ ಸಮಿತಿಯ ಸದಸ್ಯ ಶೇಖರ ಕುಕ್ಕೇಡಿ ರಾಜೀನಾಮೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಶೈಕ್ಷಣಿಕ ಸಮ್ಮೇಳನ

Suddi Udaya

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿಯ ಗೌರವ

Suddi Udaya

ಉಜಿರೆ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿಇಟಿ ಸಹಾಯ ಕೇಂದ್ರ

Suddi Udaya

ಬಂಟರ ಯಾನೆ ನಾಡವರ ಸಂಘ, ಕಣಿಯೂರು ಗ್ರಾಮ ಸಮಿತಿ ವತಿಯಿಂದ ಪದಗ್ರಹಣ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣಾ ಕಾರ್ಯಕ್ರಮ

Suddi Udaya
error: Content is protected !!