26.2 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪುದುವೆಟ್ಟು ಶಾಂತ್ಯಾಯ ಶ್ರೀ ಮಹಾಗಣಪತಿ ಭಜನಾಮಂದಿರದ ಅನ್ನಛತ್ರ ಕಟ್ಟಡದ ಕಾಮಗಾರಿಗೆ ರೂ. 1ಲಕ್ಷ ಮಂಜೂರು

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಧರ್ಮಸ್ಥಳ ಪುದುವೆಟ್ಟು ಗ್ರಾಮದ ಶಾಂತಿನಗರ ಶಾಂತ್ಯಾಯ ಶ್ರೀ ಮಹಾಗಣಪತಿ ಭಜನಾಮಂದಿರದ ಅನ್ನಛತ್ರ ಕಟ್ಟಡದ ಕಾಮಗಾರಿಗೆ ಶ್ರೀ ಕ್ಷೇತ್ರದ ಧರ್ಮಸ್ಥಳದಿಂದ ಪೂಜ್ಯರು ಮಂಜೂರು ಮಾಡಿರುವ 1ಲಕ್ಷ ರೂಪಾಯಿ ಮೊತ್ತದ ಮಂಜೂರಾತಿ ಪತ್ರವನ್ನು ಶ್ರೀಮಹಾಗಣಪತಿ ಭಜನಾ ಮಂಡಳಿಯ ಅಧ್ಯಕ್ಷ ಜನಾರ್ದನ ಗೌಡ ಹಾಗೂ ಪದಾಧಿಕಾರಿಗಳಿಗೆ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪುದುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅನಿತಾ, ಗ್ರಾಮ ಪಂಚಾಯತ್ ಸದಸ್ಯ ಯಶವಂತ ಗೌಡ, ಜನಜಾಗೃತಿ ಗ್ರಾಮ ಸಮಿತಿಯ ಅಧ್ಯಕ್ಷ ದೇವಣ್ಣ ಗೌಡ ಬೊಲ್ಮನಾರು, ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಿತ್ಯಾನಂದ ಗೌಡ, ಧರ್ಮಸ್ಥಳ ವಲಯ ಮೇಲ್ವಿಚಾರಕರಾದ ರವೀಂದ್ರ ಬಿ, ಬೊಲ್ಮನಾರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಆನಂದ ಗೌಡ, ಭಜನಾ ಮಂದಿರದ ಅರ್ಚಕರಾದ ಬಾಬು ಗೌಡ,ಹಾಗೂ ಭಜನಾ ಮಂಡಳಿಯ ಎಲ್ಲ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


ಕಾರ್ಯಕ್ರಮದ ನಿರೂಪಣೆಯನ್ನು ಶೇಖರ ಗೌಡ ಶಾಂತ್ಯಾಯ ನಿರ್ವಹಿಸಿದರು, ರಮೇಶ್ ಸಾಲ್ಯಾನ್ ಸ್ವಾಗತಿಸಿದರು, ಭಜನಾ ಮಂದಿರದ ವರದಿ ವಾಚನವನ್ನು ಹರೀಶ್ ಪಟ್ಲರವರು ನಿರ್ವಹಿಸಿದರು,

Related posts

ಕಳಿಯ ಕಲ್ಪವೃಕ್ಷ ಜ್ಞಾನ ವಿಕಾಸ ಕೇಂದ್ರದಿಂದ ಶಿಕ್ಷಣದ ಮಾಹಿತಿ ಕಾರ್ಯಕ್ರಮ

Suddi Udaya

ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್. ಪದ್ಮಗೌಡ, ಉಪಾಧ್ಯಕ್ಷರಾಗಿ ದಿನೇಶ್ ಕೋಟ್ಯಾನ್

Suddi Udaya

ಪೆರಿಂಜೆ: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ ಪ್ರಾರಂಭ

Suddi Udaya

ಧರ್ಮಸ್ಥಳ ಶಾಂತಿವನದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಖೋಟಾ ನೋಟು ಸಂಗ್ರಹಿಸಿಟ್ಟಿದ್ದ ಇಬ್ಬರ ಬಂಧನ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಗೆ ಶೇ.100 ಫಲಿತಾಂಶ

Suddi Udaya
error: Content is protected !!