ತೋಟತ್ತಾಡಿ: ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ (ಎಸ್.ಎನ್.ಡಿ.ಪಿ) ವತಿಯಿಂದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವವು ಡಿ.18ರಂದು ಶ್ರೀ ವಾಸು ಗುರುಸ್ವಾಮಿ ಪಿಲಿಕ್ಕಳ ಇವರ ನೇತೃತ್ವದಲ್ಲಿ ಶಾಖೆಯ ವಠಾರದಲ್ಲಿ ನಡೆಯಲಿದೆ.
ಸಂಜೆ ಗಂಟೆ 6:00ಕ್ಕೆ ಪಾಲಕೊಂಬು ಮೆರವಣಿಗೆ (ಬಿಲ್ಲವ ಸಂಘ ತೋಟತ್ತಾಡಿಯಿಂದ) ರಾತ್ರಿ 7:00 ಕ್ಕೆಞಷ ದೀಪಾರಾಧನೆ, ರಾತ್ರಿ ಗಂಟೆ 7-30ಕ್ಕೆ ಆಹ್ವಾನಿತ ಭಜನಾ ತಂಡಗಳ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 8:00ಕ್ಕೆ ಗಣಪತಿ ಪೂಜೆ, 8.30ಕ್ಕೆ ಉಡುಕು ಪಾಟ್, ರಾತ್ರಿ ಗಂಟೆ 9:00ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಗಂಟೆ 9:30ಕ್ಕೆ ಅನುಗ್ರಹ ಮೆಲೋಡಿಸ್ ಇವರಿಂದ ರಸಮಂಜರಿ ಕಾರ್ಯಕ್ರಮ, ರಾತ್ರಿ ಗಂಟೆ 10:00ಕ್ಕೆ ಪೀಠ ಪೂಜೆ, 11:30ಕ್ಕೆ ಅಪ್ಪ ಸೇವೆ, ರಾತ್ರಿ ಗಂಟೆ 12:00ಕ್ಕೆ ದೇವಿ ಮೆರವಣಿಗೆ, ರಾತ್ರಿ ಗಂಟೆ 12:30ಕ್ಕೆ ಅಯ್ಯಪ್ಪ ವಾವರ ದರ್ಶನ , ರಾತ್ರಿ ಗಂಟೆ 12:45ಕ್ಕೆ ಸುಬ್ರಹ್ಮಣ್ಯ ದರ್ಶನ, ರಾತ್ರಿ ಗಂಟೆ 1:00ಕ್ಕೆ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ.