ವೇಣೂರು: ಇಲ್ಲಿಯ ಪೆರಾಡಿ ಗ್ರಾಮದ ದರ್ಖಾಸು ಎಂಬಲ್ಲಿ ಮನೆಯ ಅಡ್ಡ ಪಕ್ಕಾಸಿಗೆ ಚಂದ್ರಾವತಿ(62) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಡಿ.12 ರಂದು ವರದಿಯಾಗಿದೆ.
ರಾಜೇಶ್ ಡಿ ರವರ ದೂರಿನಂತೆ ಶ್ರೀಮತಿ ಚಂದ್ರಾವತಿ(62) ಎಂಬವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದುಕೊಂಡಿದ್ದವರು ಡಿ. 11ರಂದು ಪೆರಾಡಿ ಗ್ರಾಮದ ದರ್ಖಾಸು ಮನೆ ಎಂಬಲ್ಲಿ ತನ್ನ ಹಳೇಯ ಮನೆಯ ಅಡ್ಡ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣ ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢೀಕರಿಸಿದ್ದು, ಮೃತರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದವರು ಯಾವುದೋ ವೈಯಕ್ತಿಕ ವಿಚಾರದಲ್ಲಿ ಮನನೊಂದು, ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.