29.7 C
ಪುತ್ತೂರು, ಬೆಳ್ತಂಗಡಿ
December 19, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಶುಭಾರಂಭ

ಪುಂಜಾಲಕಟ್ಟೆಯಲ್ಲಿ ಜನಔಷಧಿ ಕೇಂದ್ರ ಶುಭಾರಂಭ

ಪುಂಜಾಲಕಟ್ಟೆ: ಭಾರತೀಯ ಪ್ರಧಾನಮಂತ್ರಿ ಜನಔಷಧಿ ಕೇಂದ್ರ ಇದರ ನೂತನ ಕೇಂದ್ರವು ಪುಂಜಾಲಕಟ್ಟೆಯಲ್ಲಿ ಶುಭಾರಂಭಗೊಂಡಿತು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಉದ್ಘಾಟನೆ ನೆರವೇರಿಸಿ, ಮಾತನಾಡಿ ಪ್ರಧಾನಮಂತ್ರಿಗಳ ಕನಸಿನ ಯೋಜನೆ ನಮ್ಮ ಊರಿನಲ್ಲೂ ಸಾಕರಗೊಂಡಿದೆ, ಅತ್ತ್ಯುತಮ ಗುಣಮಟ್ಟದ ಔಷಧಿಗಳು ಕಡಿಮೆ ದರದಲ್ಲಿ ದೊರೆಯುತ್ತಿದ್ದು, ಜನರು ಇದರ ಪ್ರಯೋಜನವನ್ನು ಹೆಚ್ಚಾಗಿ ಪಡೆಯುದರೊಂದಿಗೆ ಇತರರಿಗೂ ತಿಳಿಸಬೇಕೆಂದು ಆಶಿಸಿದರು.

ಪ್ರಮುಖರಾದ ಜನಾರ್ಧನ ಪೂಜಾರಿ, ದಿನೇಶ ಪಾಂಗಾಳ, ಧನವತಿ ಹಾಗೂ ಕೇಂದ್ರದ ಸಿಬ್ಬಂದಿಗಳು ಸೇರಿ ದೀಪ ಪ್ರಜ್ವಲನೆ ಮಾಡಿದರು.

ಯುವ ನ್ಯಾಯವಾದಿ ತಾಜುದ್ದಿನ್ ಕೇಂದ್ರದಲ್ಲಿರುವ ಉಚಿತ ಇ. ಸಿ. ಜಿ. ಸೌಲಭ್ಯವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಜಕೇಸರಿ ಸಂಘಟನೆಯ ದೀಪಕ್ ಜಿ. ಹಾಗೂ ರವಿ ನಾಯ್ಕ್, ಪುರುಷೋತ್ತಮ್ ವಾಮದಪದವು ,ಬಂಟ್ವಾಳ ಕುಲಾಲ ಯುವ ವೇದಿಕೆಯ ಅಧ್ಯಕ್ಷ ನಿತೀಶ್ ಕುಲಾಲ್ ಪಲ್ಲಿಕಂಡ, ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾದ ರಾಮಯ್ಯ ಬೊಟ್ಟುಮನೆ, ಪುತ್ತೂರು ಕುಂಬಾರ ಗುಡಿ ಕೈಗಾರಿಕಾ ಬ್ಯಾಂಕ್ ನ ಮಡಂತ್ಯಾರು ಶಾಖೆಯ ವ್ಯವಸ್ಥಾಪಕರಾದ ರಕ್ಷಿತ್ ಕಲಾಕುಂಜ ಇವರು ಉಪಸ್ಥಿತರಿದ್ದು ಶುಭ ಹಾರೈಸಿದರು.


ಜನಔಷಧಿ ಕೇಂದ್ರದ ಮಾಲಕರಾದ ಮನೋಜ್ ಕುಲಾಲ್ ಬಸಬೈಲು ಬಂದ ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು.

Related posts

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ನಿರ್ದೇಶಕರಾಗಿ ರಕ್ಷಿತ್ ಶಿವರಾಂ ಆಯ್ಕೆ

Suddi Udaya

ಸ್ಪಂದನ ಪಾಲಿಕ್ಲಿನಿಕ್ ವತಿಯಿಂದ ಮನೆ ಬಾಗಿಲಿಗೆ ಬಂದು ರಕ್ತದ ಸ್ಯಾಂಪಲ್ ಸಂಗ್ರಹಿಸುವ ವ್ಯವಸ್ಥೆ

Suddi Udaya

ಪಶುಸಂಗೋಪನೆ ಇಲಾಖೆಯ ನಿವೃತ್ತ ನೌಕರನಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು

Suddi Udaya

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ತಾಲೂಕು ಮಟ್ಟದ ಇಲಾಖಾಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ರಕ್ಷಾಬಂಧನ ಆಚರಣೆ

Suddi Udaya

ಅಂಡಿಂಜೆ : ಪರಮೇಶ್ವರ ಕೆ. ನಿಧನ

Suddi Udaya
error: Content is protected !!