27.9 C
ಪುತ್ತೂರು, ಬೆಳ್ತಂಗಡಿ
March 6, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳಾಲು ಶ್ರೀ ಧ.ಮಂ.ಅ. ಪ್ರೌಢ ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಇಲ್ಲಿನ ವಾರ್ಷಿಕ ಪ್ರತಿಭಾ ದಿನ ಡಿ. 13 ರಂದು ನಡೆಯಿತು.


ಪ್ರತಿಭಾ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ಬಹುಮಾನವನ್ನು ಬೆಳಾಲು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ ಗೌಡ ವಿತರಿಸಿ, “ಎಲ್ಲರೂ ಸ್ಪರ್ಧೆ ನೀಡಿದಾಗ ಮಾತ್ರ ಪ್ರತಿಭೆ ಇರುವರು ವಿಜಯಗಳಾಗಬಹುದು. ನಾವು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಪ್ರತಿಭೆಯನ್ನು ವಿಕಾಸ ಪಡಿಸುವಂತಿರಬೇಕು” ಎಂದು ತಿಳಿಸಿದರು.

ವೇದಿಕೆಯಲ್ಲಿ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಭವಾನಿ ಮಾರ್ಪಾಲು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಧರ ಓಡಿಪ್ರೊಟ್ಟು ಇವರು ಬಹುಮಾನವನ್ನು ವಿತರಿಸಿ, ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕ ಜಯರಾಮ ಮಯ್ಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಶಿಕ್ಷಕಿ ಕುಮಾರಿ ಶ್ರೇಯ ಶ್ರೀ ವಂದಿಸಿ, ಶಿಕ್ಷಕಿ ಶ್ರೀಮತಿ ಕೋಕಿಲ ನಿರೂಪಿಸಿದರು. ಶಿಕ್ಷಕ ಗಣೇಶ್ವರ್ ಹಾಗೂ ಕೃಷ್ಣಾನಂದ ಇವರು ಕ್ರಮವಾಗಿ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು.

ಶಾಲಾ ನಾಯಕ ಲೋಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ಬೆಳಾಲು ಲಕ್ಷ್ಮಣಗೌಡ ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಶಶಿ ಪ್ರಭಾ ಪರಿಣಯ ಯಕ್ಷಗಾನ ಬಯಲಾಟ ನಡೆಯಿತು. ನಂತರ ಎಲ್ಲಾ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರಚುರಪಡಿಸಿದರು. ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಧನ್ಯ ಕುಮಾರ್ ಎಂ ಇವರು ಉಪಸ್ಥಿತರಿದ್ದು, ಶಾಲೆಯ ವಾರ್ಷಿಕ ಸಂಚಿಕೆ ವಿದ್ಯಾರ್ಥಿ ಹಸ್ತಪ್ರತಿ ‘ನವ್ಯ ಜ್ಯೋತಿ’ ಇದನ್ನು ಬಿಡುಗಡೆಗೊಳಿಸಿ ಶಾಲೆಯ ವಿಶೇಷ ಪ್ರತಿಭೆಗಳನ್ನು ಪುರಸ್ಕರಿಸಿದರು.

ಯಕ್ಷಗಾನ ನಾಟ್ಯ ತರಬೇತಿಯ ಗುರುಗಳಾದ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಣ ಗೌಡ ಪಿ., ಕರಾಟೆ ತರಬೇತುದಾರ ಮಿಥುನ್ ಮತ್ತು ವರ್ಗಾವಣೆಗೊಂಡ ಶಿಕ್ಷಕ ಜಗದೀಶ್ ಇವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು. ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಾಧಕರನ್ನು ಹಾಗೂ ಈ ವರ್ಷ ರಾಜ್ಯಮಟ್ಟದಲ್ಲಿ ಕಣಾದ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕುಮಾರಿ ಇಂದುಮತಿ ಹಾಗೂ ಕರಾಟೆ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿದ ಕುಮಾರಿ ಜಾಹ್ನವಿ ಇವರನ್ನು ಸ್ಮರಣಿಕೆ ನೀಡಿ ಗುರುತಿಸಲಾಯಿತು. ಎಸ್ ಡಿ ಎಮ್ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಹಾಗೂ ಎಸ್ ಡಿ ಎಮ್ ಪ್ರೌಢಶಾಲೆ ಪೆರಿಂಜೆಯ ಮುಖ್ಯ ಶಿಕ್ಷಕ ಮುಕುಂದ ಚಂದ್ರ ಹಾಗೂ ಹಳೆ ಪೇಟೆ ಉಜಿರೆಯ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪ್ರತಿಮಾ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ದಯಾನಂದ ಪಿ ಬೆಳಾಲು ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ,ಪ್ರತಿಭೆಗಳನ್ನು ಗೌರವಿಸಿದರು.

Related posts

ಕಂಬಳ ಸ್ಪರ್ಧೆಗೆ ಸುಪ್ರೀಂಕೋರ್ಟ್ ಅನುಮತಿ

Suddi Udaya

ಪಿಲಿಚಂಡಿಕಲ್ಲು ನಿವಾಸಿ ಶೇಕ್ ಇಮಾಮ್ ಸಾಹೇಬ್ ಮನೆಗೆ ಬಡಿದ ಸಿಡಿಲು: ಸುಟ್ಟು ಹೋದ ಮನೆಯ ವಿದ್ಯುತ್ ಸಂಪರ್ಕ, ಮನೆಯ ಗೋಡೆಗಳಿಗೆ ಹಾನಿ

Suddi Udaya

ಎಸ್.ಎಸ್.ಎಫ್ ಬೆಳ್ತಂಗಡಿ ಡಿವಿಷನ್ ನಾಯಕರ ಸೆಕ್ಟರ್ ಭೇಟಿ

Suddi Udaya

ಚಾರುಕೀರ್ತಿಭಟ್ಟಾರಕ ಸ್ವಾಮೀಜಿಯವರಿಂದ “ರತ್ನತ್ರಯ ಸಿದ್ಧಿಸೋಪಾನ” ಶಾಸ್ತ್ರದಾನ ಕೃತಿ ಬಿಡುಗಡೆ

Suddi Udaya

140 ವರ್ಷಗಳ ಇತಿಹಾಸವಿರುವ ಗೇರುಕಟ್ಟೆ ಕೊರಂಜ ಪ್ರಾಥಮಿಕ ಶಾಲಾ ನೂತನ ಕೊಠಡಿ ಉದ್ಘಾಟನೆ

Suddi Udaya

ಎ.13-23: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕ ವಿಷು ಜಾತ್ರೋತ್ಸವ       

Suddi Udaya
error: Content is protected !!